ಫುಕೆಟ್ (ಥಾಯ್ಲೆಂಡ್): ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರು ಐಡಬ್ಲ್ಯುಎಫ್ ವಿಶ್ವಕಪ್ ವೇಟ್ಲಿಫ್ಟಿಂಗ್ನ ಮಹಿಳೆಯರ 49 ಕೆ.ಜಿ ವಿಭಾಗದ ‘ಬಿ’ ಗುಂಪಿನಲ್ಲಿ ಸೋಮವಾರ ಮೂರನೇ ಸ್ಥಾನ ಪಡೆದಿದ್ದಾರೆ.
ಆದರೂ ಅವರು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ.ಗಾಯದಿಂದ ಆರು ತಿಂಗಳು ಸ್ಪರ್ಧಾಕಣದಿಂದ ದೂರವಿದ್ದ ಚಾನು ಅವರು ಒಟ್ಟು 184 ಕೆ.ಜಿ (81 ಕೆಜಿ + 103 ಕೆ.ಜಿ) ಭಾರ ಎತ್ತಿದರು. ಇದು ಪ್ಯಾರಿಸ್ ಒಲಿಂಪಿಕ್ಸ್ಗೆ ಅಂತಿಮ ಅರ್ಹತಾ ಟೂರ್ನಿಯಾಗಿತ್ತು.
ಈ ಕ್ರೀಡಾಕೂಟ ಮುಕ್ತಾಯದೊಂದಿಗೆ ಚಾನು ಪ್ಯಾರಿಸ್ ಒಲಿಂಪಿಕ್ಸ್ನ ಮಾನದಂಡಗಳನ್ನು ಪೂರೈಸಿದ್ದಾರೆ. ಎರಡು ಕಡ್ಡಾಯ ಸ್ಪರ್ಧೆಗಳು ಮತ್ತು ಇತರ ಮೂರು ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.