ಬೆಂಗಳೂರು: ರಾಜ್ಯಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸದ್ದು ಕೇಳಿ ಬರುತ್ತಿದೆ. ಹಾಲಿ ಸಚಿವರಲ್ಲಿ ಕೆಲವರಿಗೆಗೇಟ್ ಪಾಸ್ ನೀಡಲು ಸಿಎಂ ಸಿದ್ಧರಾಮಯ್ಯ ಮುಂದಾಗಿದ್ದಾರೆಎನ್ನಲಾಗುತ್ತಿದೆ. ಅಲ್ಲದೇ ಹೊಸಬರಿಗೆಅವಕಾಶವನ್ನು ನೀಡೋದಕ್ಕೆ ಪಟ್ಟಿತಯಾರಾಗಿದೆ.ಈ ಪಟ್ಟಿಯಲ್ಲಿ ಸಾಗರಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೆಸರುಕೂಡಇರುವುದಾಗಿ ಹೇಳಲಾಗುತ್ತಿದೆ.ಆ ಮೂಲಕ ಸಾಗರಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಖಚಿತಎನ್ನಲಾಗುತ್ತಿದೆ.
ಸಾಗರ ವಿಧಾನಸಭಾಕ್ಷೇತ್ರದಲ್ಲಿ ಮೂರನೇ ಬಾರಿ ಶಾಸಕರಾಗಿ ಪ್ರಸ್ತುತಕರ್ನಾಟಕರಾಜ್ಯಅರಣ್ಯಕೈಗಾರಿಕಾಅಭಿವೃದ್ಧಿ ನಿಗಮದಅಧ್ಯಕ್ಷರಾಗಿರುವ ಗೋಪಾಲಕೃಷ್ಣ ಬೇಳೂರು ಮಂತ್ರಿಯಾಗುತ್ತಾರೆಎನ್ನುವ ವದಂತಿದಟ್ಟವಾಗಿ ಹರಡಿದೆ.ಸದಾ ಮಂತ್ರಿಮAಡಲ ವಿಸ್ತರಣೆಯಾಗಬೇಕುಎನ್ನುವ ಸಂದರ್ಭದಲ್ಲಿ ಗೋಪಾಲಕೃಷ್ಣ ಬೇಳೂರು ಹೆಸರು ಮುನ್ನೆಲೆಗೆ ಬರುತ್ತದೆ.ಮತ್ತೆ ಹಾಗೆಯೇ ಮಾಯವಾಗಿ ಬಿಡುತ್ತದೆ.ಆದರೇ ಈ ಬಾರಿ ಗೋಪಾಲಕೃಷ್ಣ ಬೇಳೂರು ಮಂತ್ರಿಯಾಗಿಯೇತೀರುತ್ತಾರೆಎನ್ನುವ ಮಾತದಟ್ಟವಾಗಿ ಹರಡಿದೆ.ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದಂತ ಗೋಪಾಲಕೃಷ್ಣ ಬೇಳೂರು, ಈ ಬಾರಿಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಶಾಸಕರಾಗಿತಮ್ಮ ವರ್ಚಸ್ಸನ್ನುಕೂಡ ಹೆಚ್ಚಿಸಿಕೊಂಡಿದ್ದಾರೆ.