ಶಿಡ್ಲಘಟ್ಟ: ರೈತರ ಮತ್ತು ತಾಲೂಕಿನ ಅಭಿವೃದ್ಧಿಪರ ಕೆಲಸ ಮಾಡುವ ವ್ಯಕ್ತಿಗಳಿಗೆ ಸಹಕಾರ ನೀಡಿ “ಕಿಂಗ್ ಮೇಕರ್” ಆಗಿದ್ದ ಮೇಲೂರು ಬಿ .ಎನ್ .ರವಿ ಕುಮಾರ್ ಶಾಸಕರಾಗಿ ಮೊದಲ ಅಧಿವೇಶನದಲ್ಲಿ ರೇಷ್ಮೆ ಕೃಷಿಕರ ಮತ್ತು ರೇಷ್ಮೆ ರೀಲರ್ಸ್ ಸೇರಿದಂತೆ ಪಶು ಪಾಲಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂಬ ಹಕ್ಕುತ್ತಾಯವನ್ನು ಬೆಳಗಾಂ ಅಧಿವೇಶನದಲ್ಲಿ ಪ್ರಸ್ತಾಪಿಸಿ ತಾಲೂಕಿನ ಜನರ ಹೆಮ್ಮೆಗೆ ಕಾರಣರಾಗಿದ್ದಾರೆ.
ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಬಿಎನ್ ರವಿಕುಮಾರ್ ಅವರು ಸಹಕಾರ ನೀಡುತ್ತಾ ಬಂದಿದ್ದರು. ಆದರೆ ತಾಲೂಕಿನ ಅಭಿವೃದ್ಧಿಗೆ ಸ್ಪಂದಿಸಲಿಲ್ಲ ಎಂಬ ನೋವು ಅವರನ್ನೇ ಶಾಸಕರಾಗಿ ವಂತೆ ಮಾಡಿತು. ಮೊದಲ ಬಾರಿಗೆ ಗೆದ್ದಿರುವ ಅವರು ವಿಧಾನಸೌಧಕ್ಕೆ ಶಾಸಕರಾಗಿ ತಮ್ಮ ಹೆಜ್ಜೆ ಇರಿಸಿದ್ದರು.
ತಾಲೂಕಿನ ರೇಷ್ಮೆ ಕೃಷಿಕರು ಮತ್ತು ರೇಷ್ಮೆ ರೀಲರ್ಸ್ ಗಳ ಸಮಸ್ಯೆ ಸೇರಿದಂತೆ ಹಾಲು ಉತ್ಪಾದಕರ ಸಂಕಷ್ಟವನ್ನು ಇಂದು ಬೆಳಗಾಂ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸದನದ ಹಾಗೂ ಸರ್ಕಾರದ ಗಮನ ಸೆಳೆದಿದ್ದಾರೆ.ಗ್ರಾಮೀಣ ಸೊಗಡಿನ ಮಾತುಗಳ ಮೂಲಕ ವಿಧಾನಸಭಾ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರವಿಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ರೇಷ್ಮೆ ಕೃಷಿಕರ ಮತ್ತು ರೈತರ ಸಂಕಷ್ಟವನ್ನು ತೆರೆದಿಟ್ಟರು.
ಶಿಡ್ಲಘಟ್ಟದಲ್ಲಿ ಈಗಾಗಲೇ ಅತ್ಯಾಚಾರ ಗೂಡು ಮಾರುಕಟ್ಟೆಗೆ ರೇಷ್ಮೆ ಸಚಿವರು ಸ್ಥಳವನ್ನು ಪರಿಶೀಲನೆ ಮಾಡಿದ್ದು, ಶಾಸಕರಾಗಿ ತಾನು ಕರ್ತವ್ಯ ನಿರ್ವಹಿಸಿದ್ದೇನೆ. ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಹಣ ಕಡಿತ ಮಾಡಲಾಗಿದೆ ಹಾಗೂ ರೇಷ್ಮೆ ನೂಲಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದವರು ರೇಷ್ಮೆ ಖಾತೆ ಸಚಿವರಾದ ವೆಂಕಟೇಶ್ ಅವರನ್ನು ಒತ್ತಾಯಿಸಿದರು.
ಶಿಡ್ಲಘಟ್ಟ ವಿಧಾನಸಭಾ ಸದಸ್ಯರಾಗಿ ಅಪ್ಪಟ ರೈತ ಕುಟುಂಬದ ಬಿ ಎನ್ ರವಿ ಕುಮಾರ್ ಅವರು ಮೊದಲ ಬಾರಿಗೆ ತಾಲೂಕಿನ ಜನರ ಪರವಾಗಿ ಧ್ವನಿ ಎತ್ತಿದ್ದನ್ನು ತಾಲೂಕಿನ ಜನತೆ ಸ್ವಾಗತಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.