ಬೆಂಗಳೂರು: ಮಹಾಲಕ್ಷಿ÷್ಮ ಲೇಔಟ್ ವಿಧಾನಸಭಾ ಕ್ಷೇತ್ರದ ಶ್ರೀ ಹುತ್ತದ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಂದು ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ.ಗೋಪಾಲಯ್ಯನವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆರೋಗ್ಯಶಿಬಿರದಲ್ಲಿ ಬಿ.ಪಿ, ಶುಗರ್, ಕಂಪ್ಲೀಟ್ ಬ್ಲಡ್ ಟೆಸ್ಟ್, ಇಸಿಜಿ, ಎಕೊ, ಟೆಸ್ಟ್ಗಳನ್ನು ಮಾಡಲಾಗುತ್ತದೆ. ಕಣ್ಣಿನ ಪೊರೆಯಿರುವವರಿಗೆ ಉಚಿತ ಶಸ್ತçಚಿಕಿತ್ಸೆ, ದೃಷ್ಟಿ ದೋಷ ಇರುವವರಿಗೆ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಮೊದಲಾದ ಸೌಲಭ್ಯಗಳನ್ನು ಶಿಬಿರದಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ವಯೋಸಹಜ ಖಾಯಿಲೆಯಾದ ಬೆನ್ನುನೋವು, ಮಂಡಿನೋವಿಗೂ ಸಹ ಬೋನ್ ಡೆನ್ಸಿಟಿ ಟೆಸ್ಟ್ ಮಾಡಲಾಗುವುದು ಹಾಗೂ ತಜ್ಞ ಮೂಳೆ ವೈದ್ಯರಿಂದ ತಪಾಸಣೆ ಮಾಡಿಸಿ, ಉಚಿತ
ಔಷಧಿ ನೀಡಲಾಗುವುದು. ಎರಡು ವಾರ್ಡುಗಳಿಗೆ ಒಂದು ಆರೋಗ್ಯ ಶಿಬಿರವನ್ನು ವರ್ಷದಲ್ಲಿ ೨ ಬಾರಿ ಹಮ್ಮಿಕೊಳ್ಳಲಾಗುವುದು. ಈ ಶಿಬಿರದಲ್ಲಿ ವಯಸ್ಕ ದಂಪತಿಗಳಿಬ್ಬರೂ ಪಾಲ್ಗೊಂಡು
ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಗೋಪಾಲಯ್ಯನವರು ಹಿರಿಯ ನಾಗರಿಕರಿಗೆ ಸಲಹೆ ನೀಡಿದರು.



