ಮಾಗಡಿ: ಕ್ಷೇತ್ರದ ಮತದಾರರಲ್ಲಿ ಅಭಿವೃದ್ಧಿ ಹರಿಕಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಮತವನ್ನು ನೀಡಿ ಎಂದು ಮತದಾರಲ್ಲಿ ಮನವಿ ಮಾಡಿದ್ದೇನೆ ಹೊರತು ಇಷ್ಟೇ ಅಂತರದ ಮತಗಳನ್ನು ಕೊಡಿಸುತ್ತೇನೆ ಎಂದು ಬೇರೆಯವಂತೆ ಬೊಗಳೆ ಮಾತುಗಳನ್ನು ಹೇಳಿಲ್ಲ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಮಾಜಿ ಶಾಸಕ ಎ.ಮಂಜುನಾಥ್ ಹೇಳಿಕೆಗೆ ವ್ಯಂಗ್ಯವಾಡಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸಕ್ಕೆ ಬಾರದವರಿಗೆ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರವನ್ನು ನೀಡಿದ್ದೀರ. ಸಂಸದಾಗಿದ್ದ ವೇಳೆ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನತೆಯ ಮುಂದೆ ಇಟ್ಟು ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಮತವನ್ನು ನೀಡಿ ಎಂದು ಸಾರ್ವಜನಿಕವಾಗಿ ಮತದಾರರಲ್ಲಿ ಮನವಿ ಮಾಡಿದ್ದೇನೆ ಕ್ಷೇತ್ರದ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಕೆಲಸಕ್ಕೆ ಬಾರದವರ ಹೇಳಿಕಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ: ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬಂದರೆ ಡಿ.ಕೆ.ಸುರೇಶ್ ಅವರನ್ನು ಕರೆದುಕೊಂಡು ಬಂದರೆ ಜನತೆಯು ಮುಂದೆ ತಿಳಿಸೋಣ ಜನರು ತೀರ್ಮಾನ ಮಾಡುತ್ತಾರೆ ಕೆಲಸಕ್ಕೆ ಬಾರದವರ ಹೇಳಿಕಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಅವರು ಡಿ.ಕೆ.ಸುರೇಶ್ ಅವರ 11 ವರ್ಷಗಳ ಸಾಧನೆ ಶೂನ್ಯ ಎಂದು ನೀಡಿದ ಹೇಳಿಕೆಗೆ ಟಾಂಗ್ ನೀಡಿದರು.
ಡಿಕೆ ಸಹೋದರರಿಗೆ ವಸೂಲಿ ಮಾಡಿ ಜೀವನ ನಡೆಸುವ ಅವಶ್ಯಕತೆ ಇಲ್ಲ.ಮೇಕೆದಾಟು ಪಾದಯಾತ್ರೆ ವೇಳೆ ಡಿಕೆ ಸಹೋದರರು ವಸೂಲಿ ಮಾಡಿದ್ದಾರೆ ಎಂಬ ಮಾಜಿ ಶಾಸಕ ಎ.ಮಂಜುನಾಥ್ ಅವರ ಆರೋಪಕ್ಕೆ ಯಾರು ವಸೂಲಿ ಗಿರಾಕಿ ಇದ್ದಾರೆ ಅವರು ವಸೂಲಿ ಬಗ್ಗೆ ಮಾತನಾಡುತ್ತಾರೆ.ಇದು ಅವರ ವಸೂಲಿಯ ಅನುಭವದ ಮಾತಾಗಿದೆ.ಡಿಕೆ ಸಹೋದರರಿಗೆ ವಸೂಲಿಮಾಡಿ ಜೀವನ ಮಾಡುವಂತಹ ದರ್ದು ಇನ್ನೂಬಂದಿಲ್ಲ. ಹೆಚ್.ಸಿ.ಬಾಲಕೃಷ್ಣ ಶಾಸಕರು.
ಮಾಗಡಿ ರಂಗನಾಥ ಸ್ವಾಮಿ ಜಾತ್ರೆ ಐತಿಹಾಸಿಕವಾದಂತಹ ಜಾತ್ರೆಯಾಗಿದೆ. ಭಕ್ತಾಧಿಗಳ ಸಮ್ಮುಖದಲ್ಲಿ ರಂಗನಾಥ ಸ್ವಾಮಿ ತೇರು ಕೂಡ ಬಹಳ ವಿಜೃಂಭಣೆಯಿಂದ ನಡೆಯುತ್ತಾ ಬಂದಿದ್ದು, ಬಹಳ ವರ್ಷಗಳಿಂದ ವಿಶೇಷ ಏನೆಂದರೆ ದನಗಳ ಜಾತ್ರೆ. ದೇಶದ ಮೂಲೆಗಳಿಂದ ರೈತರು ಬಂದು ರಾಸುಗಳನ್ನು ಖರೀದಿ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ಮುಂದುವರೆದು ಟ್ರಾಕ್ಟರ್ ಗಳನ್ನು ಬಳಕೆ ಮಾಡುತ್ತಿದ್ದರು ಕೂಡ ಮಾಗಡಿ ಪಟ್ಟಣದಲ್ಲಿ ರಂಗನಾಥ ಸ್ವಾಮಿ ಆಶೀರ್ವಾದದಿಂದ ದನಗಳ ಜಾತ್ರಯ ವಿಶೇಷತೆ ಕಡಿಮೆಯಾಗಿಲ್ಲ. ಮಾಂಡವ್ಯ ಮಹರ್ಷಿಗಳು ಸ್ಥಾಪನೆ ಮಾಡಿದಂತಹ ಪಶ್ಚಿಮ ಮುಖವಾಗಿ ಇರುವಂತಹ ರಂಗನಾಥ ಸ್ವಾಮಿಯ ಮಹಿಮೆಯಿಂದ ತಾಲ್ಲೂಕಿನಲ್ಲಿ ಮಳೆ ಬೆಳೆಗಳಾಗಿ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ಜಿ.ಪಂ ಸದಸ್ಯ ಕಲ್ಕೆರೆ ಧನಂಜಯ, ಪುರಸಭಾ ಸದಸ್ಯರಾದ ಶಿವಕುಮಾರ್, ಪ್ರವೀಣ್(ರಘು), ಗ್ರಾಪಂ ಮಾಜಿ ಸದಸ್ಯ ಮಾನಗಲ್ಲು ಮಂಜುನಾಥ್, ಗುತ್ತಿಗೆದಾರ ತಿರುಮಲೆ ದೇವರಾಜ್, ದೊಡ್ಡಸೋಮನಹಳ್ಳಿ ಪಾಪಣ್ಣಗೌಡ,ಡಿ.ಜೆ.ಬಸವರಾಜು, ಚಿಕ್ಕಮುದುಗೆರೆ ಸೂರೇಶ್ ಸೇರಿದಂತೆ ಇತರರಿದ್ದರು.