ಮಾಗಡಿ: ನಮ್ಮ ಪೂರ್ವಿಕರ ಕಾಲದಿಂದಲೂ ನಾವು ನೂರಾರು ಎಕರೆ ಜಮೀನುದಾರರಾಗಿದ್ದು ನಾವು ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ, ಬಾದಾಮಿ ಬೆಳಯಲು ಅವಕಾಶವಿದೆ. ಆದರೆ ಮಾಜಿ ಶಾಸಕ ಎ.ಮಂಜುನಾಥ್ ಅವರು ಕಡಲೆ ಬೀಜವಿಲ್ಲದೇ ಎಣ್ಣೆ ತೆಗೆಯುವ ಚಾಕಚಕ್ಯತೆ ಚಾಣಾಕ್ಷತೆ ಹೊಂದಿದ್ದಾರೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
ಪಟ್ಟಣದ ಜ್ಯೋತಿ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಎ.ಮಂಜುನಾಥ್ ಅವರು ಬಾಲಕೃಷ್ಣ ಅವರ ಆಸ್ತಿ ದುಪ್ಪಟ್ಟು ಕುರಿತು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅವರ ಅಧಿಕಾರಾವಧಿಯಲ್ಲಿ ಒಬ್ಬರಿಗೆ ಐದು ಕೋಟಿ ಕಾಮಗಾರಿಯ ಕೆಲಸ ಕೊಡುವುದಾಗಿ ನಂಬಿಸಿ 50 ಲಕ್ಷ ರೂಪಾಯಿ ಪಡೆದು ಇತ್ತ ಕಾಮಗಾರಿಯೂ ಇಲ್ಲ ಇತ್ತ 50 ಲಕ್ಷವೂ ಕೊಡದೆ ವಂಚಿಸಿದ್ದಾರೆ. ಮಾದ್ಯಮದವರಿಗೆ ಬೇಕಿದ್ದರೆ ಅವರ ವಿಳಾಸ ಮತ್ತು ಫೋನ್ ನಂಬರ್ ನೀಡುತ್ತೇನೆ.
ಮಹಿಳೆಯೊಬ್ಬರ ಕುಟುಂಬಸ್ಥರಲ್ಲಿ ಜಮೀನು ಅಗ್ರಿಮೆಂಟ್ ಮಾಡಿಸಿಕೊಂಡು ಸುಮಾರು ವರ್ಷಗಳೇ ಕಳೆದರೂ ಅವರಿಗೆ ಹಣ ನೀಡದೆ ಅವರ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ.ಮಹಿಳೆಯರ ಕುಟುಂಬಸ್ಥರು ಪೆರಾಲಾಸೀಸ್ ಖಾಯಿಲೆಯಿಂದ ಬಳಲುತಿದ್ದು ಅವರ ಕುಟುಂಬ ಬೀದಿಗೆ ಬಿದ್ದಿದೆ.ಇವರ ಚಾಟಿ ಇಲ್ಲದೇ ಬುಗುರಿ ಆಡಿಸುವ ಚಾಕಚಕ್ಯತೆ ಹೊಂದಿದ್ದಾರೆ.
ಇದು ಕೇವಲ ಒಂದೆರಡು ಉದಾಹರಣೆಗಳಷ್ಟೆ ಇಂತಹ ನೂರಾರು ಮೋಸ ಮಾಡಿರುವ ಕೇಸುಗಳಿದ್ದು ಬೇಕಿದ್ದರೆ ಅದರ ಸಂಪೂರ್ಣ ದಾಖಲೆ ನೀಡುತ್ತೇನೆ.ನಮ್ಮ ಯಾವುದೇ ಈ ತೆರನಾದ ಮೋಸ ಮಾಡಿರುವ ಉದಾಹರಣೆಗಳಿದ್ದರೆ ತೋರಿಸಲಿ ಎಂದು ಮಾಜಿ ಶಾಸಕರಿಗೆ ಬಾಲಕೃಷ್ಣ ಬಹಿರಂಗ ಸವಾಲೆಸೆದರು.
ನಾನು ಶಾಸಕನಾದ ಎಂಟು ತಿಂಗಳಲ್ಲಿ ಸಂಸದ ಡಿ.ಕೆ.ಸುರೇಶ್ ಅವರ ಪರಿಶ್ರಮದಿಂದ ವಿವಿಧ ಕಾಮಗಾರಿಗಳಿಗೆ ನೂರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ.ಇದು ಮೊದಲ ಹಂತವಾಗಿದ್ದು ಇನ್ನಷ್ಟು ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ದವಾಗುತ್ತಿದೆ.ನೂರು ಕೋಟಿವೆಚ್ಚದ ಕಾಮಗಾರಿಯ ಶ್ವೇತ ಪತ್ರವನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.
ಎಚ್.ಡಿ.ಕೆ.ಯಿಂದ ಬಿಜೆಪಿಗೆ ಮುಖಭಂಗ: ರಾಜ್ಯ ಬಿಜೆಪಿಗೆ ಅಲ್ಪಸ್ವಲ್ಪ ಗೌರವವಿತ್ತು.ರಾಜ್ಯಸಭಾ ಚುನಾವಣೆಯಲ್ಲಿ ಆ ಗೌರವವನ್ನು ಕುಮಾರಸ್ವಾಮಿ ಕಳೆದಿದ್ದಾರೆ.ರಾಜ್ಯಸಭಾ ಚುನಾವಣೆಯಲ್ಲಿ ಸಂಖ್ಯಾಬಲವಿಲ್ಲ ಎಂದು ಗೊತ್ತಿದ್ದರೂ ಎಚ್.ಡಿ.ಕೆ.ಕುದುರೆ ವ್ಯಾಪಾರಕ್ಕೋಸ್ಕರವಾಗಿ ಹೆಚ್ಚುವರಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು.ನಾಲ್ಕು ಸ್ಥಾನಗಳು ಆಯ್ಕೆಯಾಗಿದ್ದರೆ ಬಿಜೆಪಿಯ ಗೌರವ ಉಳಿಯುತಿತ್ತು.ಇವರ ಮಾತು ಕೇಳಿ ಬಿಜೆಪಿಯ ಮಾನ ಮರ್ಯಾದೆ ಮೂರಾಬಟ್ಟೆಯಾಗಿದೆ ಎಂದು ಬಾಲಕೃಷ್ಣ ಲೇವಡಿ ಮಾಡಿದರು.
ಪುರಸಭಾ ಸದಸ್ಯರಾದ ಹೆಚ್.ಜೆ.ಪುರುಷೋತ್ತಮ್, ಹೊಸಪೇಟೆ ಶಿವಕುಮಾರ್, ಜಮ್ಮು, ರಿಯಾeóï, ಆಶಾಪ್ರವೀಣ್, ಶಬ್ಬೀರ್, ಮಾಜಿ ಸದಸ್ಯ ಸೊಸೈಟಿ ಗಂಗಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್.ಮಂಜುನಾಥ್, ಮುಖಂಡರಾದ ಕೇಬಲ್ ಮಂಜುನಾಥ್, ತೇಜು, ಗಿರೀಶ್, ಕಲ್ಯಾಗೇಟ್ ನವೀನ್ ಸೇರಿದಂತೆ ಮತ್ತಿತರಿದ್ದರು.