ಮಾಗಡಿ: ನಮ್ಮ ಮೇಲೆ ನಂಬಿಕೆಯಿಟ್ಟು ಈ ರಾಜ್ಯದ ಜನತೆ ಅಭೂತಪೂರ್ವಕವಾಗಿ ಆಶೀರ್ವಾದ ಮಾಡಿದ್ದಾರೆ.ನಮ್ಮದು ಅಭಿವೃದ್ಧಿ ಮಂತ್ರವೇ ಹೊರತು ಭಾವನಾತ್ಮಕ ಮಂತ್ರವಲ್ಲ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.ತಾಲ್ಲೂಕಿನ ಮಾದಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಸರಕಾರವು ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ಅವುಗಳನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ.ಇವುಗಳ ಜೊತೆಗೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುವ ನಿಟ್ಟಿನಲ್ಲಿ ನಮ್ಮ ಪಯಣ ಸಾಗಿದೆ.ಈಗಾಗಲೇ ತಾಲ್ಲೂಕಿನ ಅಭಿವೃದ್ಧಿ ಸುಮಾರು 150 ಕೋಟಿ ಹಣ ಬಿಡುಗಡೆಯಾಗಿದ್ದು ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ.ಆದರೆ ನಮ್ಮ ವಿರೋಧಿಗಳು ಕೇವಲ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ದೇಶ ಹಾಗೂ ರಾಜ್ಯದ ಜನರಿಂದ ಮತ ಪಡೆಯಲು ಹೊರಟಿದ್ದಾರೆ ಅದು ಫಲಿಸುವುದಿಲ್ಲ ಎಂದರು.
ಸಂಸದರಾದ ಡಿ.ಕೆ.ಸುರೇಶ್ ಅವರು ರಾಜ್ಯದಲ್ಲಿಯೇ ಅತ್ಯಂತ ಕ್ರಿಯಾಶೀಲ ರಾಜಕಾರಣಿಯಾಗಿದ್ದಾರೆ. ಇಂತಹ ನಾಯಕರನ್ನು ಕಳೆದು
ಕೊಂಡರೆ ಅವರಿಗೇನು ನಷ್ಠವಿಲ್ಲ ಕ್ಷೇತ್ರಕ್ಕೆ ನಷ್ಠವಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ನಮ್ಮ ಕುದುರೆಯನ್ನು ಮೈದಾನಕ್ಕೆ ಬಿಟ್ಟಿದ್ದೇವೆ.
ವಿರೋಧ ಪಕ್ಷದವರು ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ.ಈ ಭಾರಿ ಸಂಸದ ಡಿಕೆ ಸುರೇಶ್ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಬಾಲಕೃಷ್ಣ ಮನವಿ ಮಾಡಿದರು.ಸಂಸದರಾದ ಡಿ.ಕೆ.ಸುರೇಶ್ ಮಾತನಾಡಿ ತಾಲ್ಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಹತ್ತು ಎಕರೆ ಭೂಮಿ ಗುರುತಿಸಿ ಬಡವರಿಗೆ ಉಚಿತ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರಿಗೆ ಮುಕ್ತ ದಾಖಲೆ ಸಿಗಬೇಕು ಎಂದು ಎಲ್ಲಾ ದಾಖಲೆಗಳನ್ನು ಗಣಕೀಕೃತ ಮಾಡಲಾಗುತ್ತಿದೆ.ಒಂದು ವರ್ಷದಲ್ಲಿ ಎಲ್ಲಾ ರೈತರ ಭೂಮಿಗಳನ್ನು ಪೋಡಿ ಮಾಡಿಸಿ ಈ ಸ್ವತ್ತು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಹೇಮಾವತಿ ಯೋಜನೆ ನಮ್ಮ ಕನಸಿನ ಕೂಸಾಗಿದ್ದು ಈ ಹಿಂದೆ ಅಧಿಕಾರದಲ್ಲಿದ್ದವರು ಯೋಜನೆ ಅನುಷ್ಠನಗೊಳಿಸಲು ನಿರ್ಲಕ್ಷ್ಯ ವಹಿಸಿದ್ದರು.ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ 900 ಕೋಟಿ ರೂಪಾಯಿ ನೀಡಲು ಸಂಪುಟದಲ್ಲಿ ಅನುಮೋದನೆ ದೊರೆತಿದ್ದು ಇನ್ನೆರಡು ವರ್ಷಗಳಲ್ಲಿ ಮಾಗಡಿ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಲಾಗುವುದು ಎಂದು ಸುರೇಶ್ ಸ್ಪಷ್ಟಪಡಿಸಿದರು.
ಬಮೂಲ್ ನಿರ್ದೇಶಕರಾದ ನರಸಿಂಹಮೂರ್ತಿ, ಹುಲಿಕಲ್ಲು ರಾಜಣ್ಣ,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷಮಣಿಗನಹಳ್ಳಿ ಸುರೇಶ್, ಗ್ರಾಪಂ ಅದ್ಯಕ್ಷ ಸತೀಶ್,ಉಪಾಧ್ಯಕ್ಷೆ ರಂಜಿತಾ,ಮಾಜಿ ಅದ್ಯಕ್ಷ ಕೆಂಚೇಗೌಡ,ಮಾದಿಗೊಂಡನಹಳ್ಳಿ ಹಾಲಿನ ಡೈರಿ ಅದ್ಯಕ್ಷಕಳ್ಳೀಪಾಳ್ಯ ನಾಗೇಶಣ್ಣ, ಚಿಗಳೂರು ಗಂಗಾಧರ್,ಮುಖಂಡರಾದ ಪಾಪಣ್ಣಗೌಡ, ಯತೀಶ್(ಅಪ್ಪಿ) ಸಿಡಿಪಿಒ ಬಿ.ಎಲ್.ಸುರೇಂದ್ರ, ಟಿಎಚ್ಒ ಚಂದ್ರಶೇ
ಖರ್, ಆಹಾರ ಇಲಾಖಾಧಿಕಾರಿ ಚಂದ್ರಶೇಖರ್, ಎಡಿಎಲ್ಆರ್ ಆನಂದ್ ಸೇರಿ ಮತ್ತಿತರಿದ್ದರು.