ಮಾಗಡಿ: ರಾಜಕಾರಣಿಗಳಿಗಿಂತ ಪತ್ರಕರ್ತರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ.ಅವರುಗಳು ನಮ್ಮನ್ನು ಎಚ್ಚರಿಸಿದಾಗ ಮಾತ್ರ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯವಾಗುತ್ತದೆ ಎಂದು ಕೆ.ಆರ್.ಡಿ.ಸಿ.ಎಲ್ ಅದ್ಯಕ್ಷರು, ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಬಾಲಾಜಿ ಪಂಕ್ಷನ್ ಹಾಲ್ ನಲ್ಲಿ ನಡೆದ ಮಾಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಮಾಧ್ಯಮ ಬಂಧುಗಳ ಸಮಾಗಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಬದುಕು ಕಟ್ಟಿಕೊಳ್ಳಲು ವಿವಿಧ ರಂಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಅವರನ್ನು ದೂಷಿಸಲು ಹೋಗಬಾರದು.ಪತ್ರಕರ್ತರು ಪ್ರತಿನಿತ್ಯ ನಾವು ಮಾಡುತ್ತಿರುವ ಮಾಡುವ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೀರಿ ಎಂದರು.
ಡಿವಿಜಿ ಅವರು ಪತ್ರಕರ್ತರ ಸಂಘಟನೆ ಮಾಡಿ ನಾಲ್ಕನೇ ಅಂಗವಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿದರು.
ಈ ಹಿಂದೆ ಕೆಂಪೇಗೌಡರ ಹೆಸರಿನಲ್ಲಿ ಅಜಿತ್ ಹನುಮಕ್ಕನವರ್ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ್ದು, ಈ ವರ್ಷ ರಮಾಕಾಂತ್ ಅವರನ್ನು ಆಯ್ಕೆ ಮಾಡಿರು ವುದು ಒಳ್ಳೆಯ ಬೆಳವಣಿಗೆ ಎಂದು ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಜಿಲ್ಲೆಯ ಎಲ್ಲ ಪತ್ರಕರ್ತರು ಜನಪರ ವರದಿಗಾರರಾಗಿ ಕೆಲಸ ಮಾಡಿ, ಉತ್ತಮ ಪ್ರಶಸ್ತಿ ನೀಡಿ ಗೌರವಿಸಿರುವುದು ಇತರ ಸಂಘಗಳಿಗೆ ಮಾಗಡಿ ತಾಲೂಕು ಸಂಘ ಮಾದರಿಯಾಗಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಗ್ಯಾರಂಟಿ ಯೋಜನಾ ಘಟಕದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ ವ್ಯಕ್ತಿನಿಂದನೆಗಳ ಸುದ್ದಿಗಳಿಗೆ ಪತ್ರಕರ್ತರು ಮನ್ನಣೆ ನೀಡದೆ,ಸುದ್ದಿಯ ಬಗ್ಗೆ ಚಿಂತನೆ ನಡೆಸಿ ವರದಿಗಳನ್ನು ಮಾಡಿದರೆ ಸಮಾಜಕ್ಕೆ ಸೂಕ್ತ ಸಂದೇಶ ಕೊಡಬಹುದು.ಹಾಗಾಗಿ ತಾಲೂಕು ಸಂಘದ ಪದಾಧಿಕಾರಿಗಳು ಉತ್ತಮ ಕಾರ್ಯ ಮಾಡಿ ಎಂದು ಶುಭ ಕೋರಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ ಮಾಗಡಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದ್ದು, ಇದಕ್ಕೆ ಶಾಸಕರು,ಅಧ್ಯಕ್ಷರ ಶ್ರಮ ಶ್ಲಾಘನೀಯವಾಗಿದೆ. ಸಮಾಜದಲ್ಲಿ ಪತ್ರಕರ್ತ ಎಂದರೆ ಗೌರವವಿದೆ.ವಿವಿಧ ಹಂತಗಳಲ್ಲಿ ತಮ್ಮದೇ ಆದ ಕೊಡುಗೆಯಿದೆ.ಕೆಲವರು ತಮ್ಮ ರಕ್ಷಣೆಗಾಗಿ, ಬ್ಲಾಕ್ ಮೇಲ್ ಮಾಡುವ ಪತ್ರಕರ್ತರು ಇದ್ದಾರೆ.ಅಂತವರನ್ನು ದೂರ ಇಡುವ ಕೆಲಸ ಮಾಡಿ ತಾವುಗಳು ವೃತ್ತಿ ಬದ್ದತೆ ಮತ್ತು ಶ್ರದ್ಧೆಯನ್ನು ಪ್ರದರ್ಶನ ಮಾಡುವ ಮೂಲಕ ಸಮಾಜಕ್ಕೆ ನೈಜ ಸುದ್ಧಿ ಬಿತ್ತರಿಸಿ ಒಳ್ಳೆಯ ಹೆಸರು ಗಳಿಸಿ ಎಂದು ಕಿವಿ ಮಾತು ಹೇಳಿದರು.
ಟಿವಿ 5 ಮುಖ್ಯಸ್ಥ ರಮಾಕಾಂತ್ ಆರ್ಯ ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಪತ್ರಕರ್ತರ ಸಂಖ್ಯೆ ಹೆಚ್ಚಾದಂತೆ ನೈಜ ಸುದ್ದಿಗಳ ಬಗ್ಗೆ ಪತ್ರಕರ್ತರು ಸಹ ಜಾಗೃತೆ ವಹಿಸುವ ಅಗತ್ಯತೆ ಇದೆ. ವಿವಿಧ ಕ್ಷೇತ್ರಗಳಲ್ಲಿ ಯಾವುದಾದರೂ ಅಭಿವೃದ್ಧಿ ಕಂಡರೆ ಅದರ ಹಿಂದೆ ಪತ್ರಕರ್ತರ ಶ್ರಮವಿರುತ್ತದೆ. ಪತ್ರಕರ್ತರು ಪ್ರಶ್ನೆ ಮಾಡುವುದನ್ನು ಕಲಿಯಬೇಕಿದೆ. ನಾವು ವಿಶ್ವಾಸ, ನಂಬಿಕೆಯಿರುವ ಕಡೆ ಇರಬೇಕು. ಕರ್ತವ್ಯ ಬದ್ದತೆ ಇದ್ದರೆ ಎಲ್ಲರೂ ನಿಮ್ಮ ಜೊತೆ ಇರುತ್ತಾರೆ ಎಂದರು.ಸತ್ಯದ ಪ್ರತಿಯೊಂದಿಗೆ ವೃತ್ತಿ ಮಾಡಿದರೆ ಆತ್ಮಾವ ಲೋಕನ ,ಸತ್ಯಾಸತ್ಯತೆ ಇದ್ದರೆ ಸಾಕು ನಿಜವಾದ ಪತ್ರಕರ್ತರಾಗಲು ಸಾಧ್ಯ. ನನಗೆ ಕೆಂಪೇಗೌಡರ ನೆಲದಲ್ಲಿ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿರು ವುದು ನನಗೆ ಬಹಳ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಟಿವಿ 5 ನ ಮುಖ್ಯಸ್ಥ ರಮಾಕಾಂತ್ ಆರ್ಯ ಅವರಿಗೆ ಕೆಂಪೇಗೌಡ ಪ್ರಶಸ್ತಿ, ಕನ್ನಡಪ್ರಭ ಜಿಲ್ಲಾ ವರದಿಗಾರ ಎಂ.ಅಪ್ರೋಜ್ ಖಾನ್, ಚನ್ನಪಟ್ಟಣ ವಿಜಯವಾಣಿ ವರದಿಗಾರ ಅಭಿಷೇಕ್ ಅವರಿಗೆ ಜನಪರ ವರದಿಗಾರ ಪ್ರಶಸ್ತಿ, ರೈತ ಸಂಘದ ಧನಂಜಯ್ಯ ಅವರಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಮುತಗ್ಗೀಕುಪ್ಪೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯ ಸಂಘದ ಉಪಾಧ್ಯಕ್ಷ ಮತ್ತೀಕೆರೆಜಯರಾಂ, ಪತ್ರಕರ್ತರ ಸಂಘದ ರಾಜ್ಯ ಪರಿಷತ್ತು ಸದಸ್ಯ ಶಿವಮಾಧು,ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ತಾಲೂಕು ಅಧ್ಯಕ್ಷರಾದ ವೆಂಕಟೇಶ್, ಮಂಜುನಾಥ್, ಹಿರಿಯ ಪತ್ರಕರ್ತ ಚಲುವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೂಜಾರಿಪೂಳ್ಯ ಕೃಷ್ಣಮೂರ್ತಿ, ತಿಪ್ಪಸಂದ್ರ ವೆಂಕಟೇಶ್, ಜುಟ್ಟನಹಳ್ಳಿ ವಿಎಸ್ಎಸ್ಎನ್ ಅದ್ಯಕ್ಷ ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಕಾಶ್, ವೃತ್ತ ಆರಕ್ಷಕ ನಿರೀಕ್ಷಕರಾದ ಶ್ರೀನಿವಾಸ್, ಟಿಎಪಿಸಿಎಂಎಸ್. ಮಾಜಿ ಅಧ್ಯಕ್ಷ,ಏಳಿಗೇಹಳ್ಳಿ ತಮ್ಮಣ್ಣಗೌಡ,ಪುರಸಭೆ ಮಾಜಿ ಅದ್ಯಕ್ಷೆ ಶಿವರುದ್ರಮ್ಮ ವಿಜಯಕುಮಾರ್, ಮಾಜಿ ಸದಸ್ಯರಾದ ಶಿವಕುಮಾರ್, ವಿಜಯಾರೂಪೇಶ್, ತಾಲ್ಲೂಕು ರೈತಸಂಘದ ಅದ್ಯಕ್ಷ ಲೋಕೇಶ್, ಶೈಲಜಾ ವೆಂಕಟೇಶ್, ಪ್ರೊ.ನಂಜುAಡಯ್ಯ, ಪ್ರಸನ್ನಗೌಡ, ತಗ್ಗೀಕುಪ್ಪೆ ದಿನೇಶ್, ಪಾಪಣ್ಣಗೌಡ, ಬಸಂತಿ, ಪತ್ರಕರ್ತರಾದ ಕಿರಣ್, ಜಿಲ್ಲಾ ಕಾರ್ಯದರ್ಶಿ ಸಿದ್ಧಲಿಂಗೇಶ್ವರ್, ಶ್ರೀನಿವಾಸ್, ತಿನಾ. ಪದ್ಮನಾ ತೇಜುಮೂರ್ತಿ, ನಾಗೇಶ್, ಪದ್ಮನಾಭ್, ನರಸಿಂಹಮೂರ್ತಿ, ಕಡೇ
ಮನೆ ಕುಮಾರ್, ರೂಪೇಶ್, ಬಾಬು , ತಟವಾಳು ರಾಜು.ಮುನಿಯಪ್ಪ ಮತ್ತಿತರಿದ್ದರು.
ಪತ್ರಕರ್ತರು ರಾಜಕಾರಣಿಗಳನ್ನು ಎಚ್ಚರಿಸಿದಾಗ ಅಭಿವೃದ್ಧಿ ಸಾಧ್ಯ: ಶಾಸಕ ಹೆಚ್.ಸಿ.ಬಾಲಕೃಷ್ಣ



