ಕೆ.ಆರ್.ಪೇಟೆ: ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆನ್ನುವ ಏಕೈಕ ಉದ್ದೇಶದಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ಶಾಸಕರಾದ ಹೆಚ್.ಟಿ ಮಂಜು ತಿಳಿಸಿದರು.
ಪಟ್ಟಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ನಾಲ್ಕು ಕೋಟಿ ವೆಚ್ಚದ ಹೈಟೆಕ್ ಗ್ರಂಥಾಲಯ ಮತ್ತು ಲ್ಯಾಬ್ ಕಟ್ಟಡ ಮತ್ತು ಕೃಷ್ಣ ಸರ್ಕಾರಿ ಇಂಜಿನಿಯರ್ ಕಾಲೇಜಿಗೆ ಎರಡು ಕೋಟಿ ವೆಚ್ಚದ ತಡೆಗೋಡೆ ( ಕಾಂಪೌಂಡ್ ) ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ತಾಲೂಕಿಗೆ ಇಂಜಿನಿಯರ್.
ಮತ್ತು ಪಾಲಿಟೆಕ್ನಿಕ್ ಕಾಲೇಜುಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಳಿರತ್ನಗಳಿದ್ದಂತೆ ಅಂದಿನ ಕಾಲದಲ್ಲೇ ಹಿರಿಯ ರಾಜಕಾರಣಿಯ ಫಲವಾಗಿ ಜಿಲ್ಲಾ ಹಂತದಲ್ಲಿ ಇರಬೇಕಾದಂತಹ ತಾಂತ್ರಿಕ ಕಾಲೇಜುಗಳು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ತುಂಬಲು ಹೆಚ್ಚು ಶ್ರಮವಹಿಸಿದ್ದಾರೆ.
ಅದಕ್ಕೆ ಪೂರಕವಾಗಿ ಇಂದಿನ ಯುವಕರೇ ಮುಂದಿನ ಸದೃಢ ಸಮಾಜದ ಪ್ರಜೆಗಳು ಮನಗೊಂಡು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ ಇಂದು ಹೈಟೆಕ್ ಗ್ರಂಥಾಲಯ.ಲ್ಯಾಬ್ ಮತ್ತು ಕಾಲೇಜಿನ ರಕ್ಷಣೆಗಾಗಿ ತಡೆಗೋಡೆ ಕಾಮಗಾರಿಗೆ ಶುಭ
ಸಮಯದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದೇವೆ.
ಈ ಕಾಮಗಾರಿಗಳನ್ನು ಸಂಬಂಧ ಪಟ್ಟ ಕಾಲೇಜಿನ ಪ್ರಾಂಶುಪಾಲರು ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಉಪಯೋಗವಾಗುವಂತೆ ಗುತ್ತಿಗೆದಾರರು ಕಳಪೆ ಕಾಮಗಾರಿಗೆ ಆದ್ಯತೆ ನೀಡದೆ ಗುಣಮಟ್ಟದ ಕಾಮಗಾರಿಗೆ ಹೆಚ್ಚು ಒತ್ತು ನೀಡಿ. ವಿದ್ಯಾರ್ಥಿಗಳಿಗೆ ಶೀಘ್ರವೇ ಸದ್ಬಳಕೆ ಆಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮವಿಸಬೇಕು ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ಈ ಸಂದರ್ಭದಲ್ಲಿ ಮನ್ಮುನ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿ ಕುಮಾರ್, ಪುರಸಭಾ ಸದಸ್ಯ ಗಿರೀಶ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ನಾಗರಾಜು, ಕೃಷ್ಣ ಸರ್ಕಾರಿ ಇಂಜಿನಿಯರ್ ಕಾಲೇಜ್ ಪ್ರಾಂಶುಪಾಲ ದಿನೇಶ್, ಉಪನ್ಯಾಸಕ ಡಿಂಕಾ ಮಹೇಶ್, ಅಧಿಕಾರಿ ವೆಂಕಟೇಶ್, ಗುತ್ತಿಗೆದಾರ ಶೀಳನೆರೆ ಭರತ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸೇರಿದಂತೆ ಉಪಸ್ಥಿತರಿದ್ದರು.