ಕೆ.ಆರ್.ಪೇಟೆ: ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಪ್ರಖರತೆ ನಡುವೆಯೂ, ತಾಲೂಕಿನ ಗ್ರಾಮೀಣ ಮಹಿಳೆಯರಿಗೆ ನಿರಂತರ ಆದಾಯ ತಂದುಕೊಡುವ ಹೈನುಗಾರಿಕೆ ಉದ್ಯಮಕ್ಕೆ ‘ಕ್ಷೀರ ಸಂಜೀವಿನಿ’ ಯೋಜನೆ ಆಸರೆಯಾಗಿದೆ ಎಂದು ಶಾಸಕ ಮತ್ತು ಮನ್ಮುಲ್ ನಿರ್ದೇಶಕರಾದ ಹೆಚ್. ಟಿ ಮಂಜು ತಿಳಿಸಿದರು.
ತಾಲೂಕಿನ ಬೂಕನಕೆರೆ ಹೋಬಳಿಯ ವಿಜಯಹೊಸಳ್ಳಿ ಗ್ರಾಮದಲ್ಲಿರುವ ಡೈರಿ ಆವರಣದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಕ್ಷೀರ ಸಂಜೀವಿನಿ ಅಂತ ಎರಡನೇ ಹೆಚ್ಚುವರಿ ಸಂಘಗಳ ಯೋಜನೆ ಅಡಿಯಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು.
ಮಹಿಳೆಯರ ವೃತ್ತಿ ಕೌಶಲತೆ ಅಭಿವೃದ್ಧಿ ಪಡಿಸುವುದು. ಹೈನೋದ್ಯಮದಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಕ್ಷೀರ ಸಂಜೀವಿನಿ ಯೋಜನೆ ನೆರವು ಒದಗಿಸುತ್ತಿದೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹಾಗೂ ಆದಾಯ ಹೆಚ್ಚಿಸುವ ಸಲುವಾಗಿ ಮಹಿಳೆಯರನ್ನು ಸಂಘಟಿಸಿ, ಸಹಕಾರಿ ಹಾಲು ಉತ್ಪಾದಕರ ಮಹಿಳಾ ಸಂಘಗಳನ್ನು ರಚಿಸುವುದು, ವೃತ್ತಿಯಲ್ಲಿ ನೈಪುಣ್ಯತೆ ಪಡೆಯಲು ವೃತ್ತಿ ತರಬೇತಿ ನೀಡುವುದು, ಹೈನುಗಾರಿಕೆಯಂಥ ಆದಾಯ ತರುವ ಚಟುವಟಿಕೆ ಹಮ್ಮಿಕೊಳ್ಳಲು ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವುದು,
ಉತ್ಪಾದಿತ ಹಾಲಿಗೆ ನಿರಂತರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಮೂಲಕ ಮಹಿಳೆಯರ ಅಭ್ಯುದಯ ಸಾಧಿಸುವುದು, ಕಾನೂನು ಅರಿವು, ಪೌಷ್ಟಿಕ ಆಹಾರ, ಆರೋಗ್ಯ ಪಾಲನೆ ಇತ್ಯಾದಿ ಶಿಬಿರ ನಡೆಸುವುದರ ಮೂಲಕ ಮಹಿಳೆಯರಲ್ಲಿ ನಾಯಕತ್ವಗುಣ ಬೆಳೆಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು ಈ ಯೋಜನೆಯಲ್ಲಿದೆ ಎಂದು ಉತ್ಪಾದಕರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ತಾ. ಪಂ ಮಾಜಿ ಸದಸ್ಯ ಹುಲ್ಲೆಗೌಡ, ಚಿಕ್ಕ ಗಾಡಿಗನಹಳ್ಳಿ ಗ್ರಾ.ಪಂ ಸದಸ್ಯ ಪರಮೇಶ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಭಾರತ್ ರಾಜ್ ಮಾರ್ಗ ವಿಸ್ತರಣಾಧಿಕಾರಿಗಳಾದ ಹೆಚ್.ಎನ್ ರಾಘವೇಂದ್ರ, ರೀತನ್ ಡಿ ಎಸ್,ಪಶುಸತಿ ಚಂದ್ರಕಲಾ ಚೇತನ್ ಕುಮಾರ್, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೇ ಶೃತಿ ಜಗದೀಶ್, ಸದಸ್ಯರಾದ ರತ್ನಮ್ಮ ಮರಿಸ್ವಾಮಿಗೌಡ, ಜಯಮ್ಮ ಲೇಟ್ ತಿಮ್ಮೇಗೌಡ, ರತ್ನಮ್ಮ ಲೇಟ್ ರಾಜೇಗೌಡ, ಶಕುಂತಲಾ ಪ್ರಕಾಶ, ಮಂಗಳಮ್ಮ ಮಹೇಶ್, ಕಾರ್ಯದರ್ಶಿ ಪುನೀತ ಧನ್ಯ ಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.