ಕನಕಪುರ: ಜೆ.ಡಿ.ಎಸ್ ಮಾಜಿ ಶಾಸಕಿ ಅನಿತಾಕುಮಾರ ಸ್ವಾಮಿಯವರ ಕಾಲದಲ್ಲಿ ಮಂಜೂರಾದ, ಮುಗಿದ ಕಾಮಗಾರಿಗಳಿಗೆ ಮರು ಉದ್ಘಾಟನೆಯ ಭಾಗ್ಯವನ್ನು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮಾಡುತ್ತಿದ್ದಾ ರೆಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜೆ.ಡಿ.ಎಸ್ ಮುಖಂಡ ರಾಮು ಆರೋಪಿಸಿದ್ದಾರೆ.
ನಗರದ ಖಾಸಗಿ ಕಲ್ಯಾಣಮಂಟಪದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ಈ ಹಿಂದೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್ ಶಾಸಕಿ ಅನಿತಾ ಕುಮಾರಸ್ವಾಮಿಯವರ ಅನುದಾನದ ಕಾಮಗಾರಿಗಳು ಹಾಗೂ ಅವರು ಸರ್ಕಾರದ ಜೊತೆ ಹೋರಾಟ ಮಾಡಿ ಮಂಜೂರು ಮಾಡಿಸಿದ್ದ ಹಾಗೂ ಅಪೂರ್ಣ ಯೋಜನೆ ಗಳನ್ನು ಮತ್ತೊಮ್ಮೆ ಉದ್ಘಾಟನೆ ಮಾಡುವ ಕೆಲಸಕ್ಕೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಆರಂಭ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಇದಕ್ಕೆ ಪೂರಕವೆಂಬತೆ ಕಳೆದ ಮೂರು ದಿನಗಳ ಹಿಂದೆ ಮರಳವಾಡಿ ಹೋಬಳಿ ಕರಿಕಲ್ದೊಡ್ಡಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನವನ್ನು ಶಾಸಕಿ ಅನಿತಾ ಕುಮಾರ ಸ್ವಾಮಿ ಮಂಜೂರು ಮಾಡಿಸಿಕೊಂಡು ಬಂದಿದ್ದರು ಇಲ್ಲಿನ ಸ್ಥಳೀಯ ಕಾಂಗ್ರೆಸ್ ಎಂ.ಎಲ್.ಎ ತಮ್ಮ ಅನುದಾನ ಹಾಗೂ ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದ ಅನು ದಾನ ಎಂಬಂತೆ ಹಳೆಯ ಕಾಮಗಾರಿಗಳಿಗೆ ಉದ್ಘಾಟನೆ ಮಾಡುವ ಕಾಯಕ ಆರಂಭಿಸಿದ್ದಾರೆ,ಇದೇ ರೀತಿ ಇವರು ಜೆ.ಡಿ.ಎಸ್ ಎಂ.ಎಲ್.ಎ ಅನಿತಾ ಕುಮಾರಸ್ವಾಮಿ ಯವರು ಮಂಜೂರು ಮಾಡಿಸಿದ್ದ ಕಾಮಗಾರಿಗಳು, ಗುದ್ದಲಿ ಪೂಜೆ ಮಾಡಿ ಸ್ಥಗಿತಗೊಂಡಿರುವ ಕಾಮಗಾರಿ ಗಳನ್ನು ಮರು ಉದ್ಘಾಟನೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಕ್ಬಾಲ್ ಹುಸೇನ್ ತಮ್ಮ ಸರ್ಕಾರದಿಂದ ಇದುವರೆವಿಗೂ ನಯಾ ಪೈಸೆ ಹಣವನ್ನು ಅಭಿವೃದ್ಧಿಗೆ ತಂದಿಲ್ಲ, ಆದರೆ ಮತ್ತೊಬ್ಬರು ಮಂಜೂರು ಮಾಡಿಸಿರುವ ಕಾಮಗಾರಿ ಗಳಿಗೆ ಉದ್ಘಾಟನೆ ಮಾಡಲು ಇವರೇ ಬೇಕೆ?, ಕೇಂದ್ರ ಸರ್ಕಾರದ ಮಹತ್ವಾಂಕ್ಷೆ ಯೋಜನೆಯಾದ ರಾಷ್ಟ್ರೀಯ ಉದ್ಯೋಗ ಖಾತ್ರಿ(ನರೇಗಾ) ಕಾಮಗಾರಿಗಳನ್ನು ಸಹ ಉದ್ಘಾಟನೆ ಮಾಡುವ ಮಾಡಿ ಪ್ರಚಾರ ಪಡೆಯಲು ಹೊರಟಿದ್ದಾರೆ. ಇಂತಹ ಕೀಳು ಮಟ್ಟದ ಅಭಿರುಚಿಯನ್ನು ಬಿಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ತಮ್ಮ ಸರ್ಕಾರವೇ ಇರುವುದರಿಂದ ಹೆಚ್ಚು ಹೆಚ್ಚು ಅನುದಾನ ಬಿಡುಗಡೆ ಮಾಡಿಕೊಂಡು ಅಭಿವೃದ್ಧಿಗೆ ಶ್ರಮಿಸಲಿ ಎಂದರು.ತೋಕಸಂದ್ರ ಗ್ರಾ.ಪಂ ಮಾಜಿ ಅಧ್ಯಕ್ಷ ಶಿವರುದ್ರ ಈ ಸಂದರ್ಭದಲ್ಲಿ ಜೊತೆಯಲ್ಲಿದ್ದು ಅವರೂ ಸಹ ಶಾಸಕರ ವರ್ತನೆಯನ್ನು ಖಂಡಿಸಿದರು.