ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೊಬಳಿಯ ನಾಗರಘಟ್ಟ ಗ್ರಾಪಂ ವ್ಯಾಪ್ತಿಯ ವಿಶೇಷ ಗ್ರಾಮಸಭೆಯನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಸಭೆಗಳ ಮೂಲಕ ಗ್ರಾಮದ ಕುಂದು ಕೊರತೆಗಳನ್ನು ಮತ್ತುಗ್ರಾಮಕ್ಕೆ ಬೇಕಾಗಿರುವಂತಹ ಸವಲತ್ತುಗಳನ್ನು ಮಂಜೂರು ಮಾಡಿಸಿಕೊಳ್ಳ ಬಹುದು, ಈ ಸಭೆಗಳಿಗೆ ಭಾಗವಹಿಸು ವುದರ ಮೂಲಕ ತಮ್ಮ ಹಕ್ಕುಗಳನ್ನು ಖಾತ್ರಿಪಡಿಸಿಕೊಳ್ಳಿ ಎಂದರು.
ಅಧ್ಯಕ್ಷೆ ಭಾಗ್ಯಮ್ಮ ಮಾತನಾಡಿ, ಈ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಮನೆಯಿಲ್ಲದವರಿಗೆ ಮನೆ ಗುರ್ತಿಸುವಿಕೆ, ಮತ್ತು ಫಲಾನುಭವಿಗಳ ಪಟ್ಟಿ, ಡಿಜಿಟಲ್ ಗ್ರಂಥಾಲಯ ಮತ್ತು ಕಾಮಗಾರಿ ವೀಕ್ಷಣೆ, ನೀರಿನ ವ್ಯವಸ್ಥೆ, ಚಂರಂಡಿ ಕಾಮಗಾರಿಗಳ ವೀಕ್ಷಣೆಯನ್ನು ಈ ಗ್ರಾಮಸಭೆಯ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅರ್ಹ ಫಲಾನುಭವಿಗಳನ್ನು ಗುರ್ತಿಸಿದ್ದು ಈ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಉಪಾಧ್ಯಕ್ಷೆ ವಿನೋದಮ್ಮ ಮಾತನಾಡಿ, ಶೌಚಾಲಯ, ಮನೆಗಳು, ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಈ ಗ್ರಾಮ ಸಭೆಗಳು ಬಹುಮುಖ್ಯ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕಾದರೆ ಈ ಸಭೆಗಳಿಗೆ ಖಡ್ಡಾಯವಾಗಿ ಹಾಜರಿದ್ದು ಫಲಾನುಭವಿಗಳಾಗಬಹುದು ಎಂದರು.
ಪಿಡಿಓ ಗೋಪಾಲು, ಸದಸ್ಯರಾದ ಅಶೋಕ್, ಮೋಹನ್ ಕುಮಾರ್, ವೆಂಕಟೇಶ್, ಹೇಮಲತ, ಶಾರದಮ್ಮ, ಎಸ್ಡಿಎ ನಳಿನ ಮುಖಂಡರುಗಳಾದ ಉಮೇಶ್, ಪ್ರಭು, ಪಟೇಲ್ ಶ್ರೀನಿವಾಸ್, ಶಿವರಾಮು ಮತ್ತು ನಾಗರಾಜು ಸೇರಿದಂತೆ ಸಿಬ್ಬಂದಿವರ್ಗ, ಗ್ರಾಮದ ಗ್ರಾಮಸ್ಥರು ಬಾಗವಹಿಸಿದ್ದರು.