ಚಿತ್ರದುರ್ಗ: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚಿತ್ರದುರ್ಗ ಪ್ರಮುಖ ರಸ್ತೆಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರಸ್ತೆ ವಿಭಜಕ ವಿಭಜಕಗಳ ಕುರಿತು ಚರ್ಚೆ ನಡೆಯಿತು.ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಕೆ.ಸಿ ವೀರೇಂದ್ರ ಪಪ್ಪಿ ಈ ಕುರಿತು. ಪ್ರಶ್ನಿಸಿ ಸರ್ಕಾರದ ಗಮನ ಸೆಳೆದರು.
ಇತಿಹಾಸ ಪ್ರಸಿದ್ಧ ಚಿತ್ರದುರ್ಗ ನಗರದಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿ ವಾಹನಗಳು ನಗರದಲ್ಲಿ ಸಂತರಿಸುತ್ತಿದ್ದು. ನಗರದ ಚಿಕ್ಕದಾದ ರಸ್ತೆಗಳಿಂದ ವಾಹನ ಸಂಚಾರ ದಟ್ಟಣೆಯಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ.ನಗರದ ಮುಖ್ಯ ರಸ್ತೆಗಳು ಕೇವಲ 40 ಅಡಿ ಅಗಲವಿದ್ದು. ಈ ಕಿರು ರಸ್ತೆಯ ಮಧ್ಯದಲ್ಲಿ ಐದು ಅಡಿ ಎತ್ತರ 4 ಅಡಿ ಅಗಲದ ರಸ್ತೆ ವಿಜಯ ವಿಭಜಕಗಳನ್ನು ನಿರ್ಮಿಸಲಾಗಿದೆ.
ಇದರಿಂದಾಗಿ ಪಾದಚಾರಿಗಳಿಗೂ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು. ರಸ್ತೆ ಅಪಘಾತಗಳು ಹೆಚ್ಚಾಗಿವೆ ಎಂದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಗಾಂಧಿ ವೃತ್ತ ಸಂಪರ್ಕಿಸುವ ರಸ್ತೆ ಕಳೆದ 35 ವರ್ಷಗಳಿಂದ ಏಕಮುಖ ಸಂಚಾರಿ ರಸ್ತೆಯಾಗಿದೆ. ಬಿರುದಾದ ಏಕಮುಖ ರಸ್ತೆಯಲ್ಲಿ ಸಹ ದೊಡ್ಡ ರಸ್ತೆ ವಿಭಜಕಗಳನ್ನು ನಿರ್ಮಿಸಿದ್ದು. ಬರಿ 10.12 ಅಡಿ ರಸ್ತೆಯಲ್ಲಿ ಲಾರಿ ಬಸವನಗಳು ಇತರೆ ಬಾರಿ ವಾಹನಗಳ ತೊಂದರೆಯಾಗಿದೆ.
ಈ ರಸ್ತೆ ವಿಭಜಕಗಳನ್ನು ತೆರವು ಗೊಳಿಸ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸಂಬಂಧ ಪಟ್ಟ ಪಿ.ಡಬ್ಲ್ಯೂ.ಸಚಿವ ಸತೀಶ್ ಜಾರಕಿಹೊಳಿ ಪರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾತನಾಡಿ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿತ್ತೇವೆ ಎಂದು ಹೇಳಿದರು.