ಹನೂರು: ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡ 515 ನೇ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಶಾಸಕ ಎಂ ಆರ್ ಮಂಜುನಾಥ್ ಪುಷ್ಪನಮನ ಸಲ್ಲಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಿರ್ಮಾಣದಲ್ಲಿ ಅಪಾರ ಶ್ರಮ ವಹಿಸಿದ್ದ ಪರಿಣಾಮ ಇಂದು ಬೆಂಗಳೂರು ಬೃಹತ್ ಮಟ್ಟದಲ್ಲಿ ಬೆಳೆದಿದ್ದು, ವಿಶ್ವಖ್ಯಾತಿ ಗಳಿಸಿವೆ. ಕೆಂಪೇಗೌಡರು 16ನೇ ಶತಮಾನದಲ್ಲಿಯೇ ಬೆಂಗಳೂರು ಪಟ್ಟಣದ ನಿರ್ಮಾಣಕ್ಕೆ ಅಡಿಗಲ್ಲು ನೆಟ್ಟು ಮಹಾನಗರ ನಿರ್ಮಾಣದ ಕನಸು ಕಂಡಿದ್ದರು.
ಆ ದಿನಗಳಲ್ಲಿಯೇ ವ್ಯವಾಹರಕ್ಕೆ ಒಂದು ರಸ್ತೆ, ವಾಸಕ್ಕೆ ಪ್ರತ್ಯೇಕ ಬಡಾವಣೆಗಳನ್ನು ನಿರ್ಮಾಣ ಮಾಡಿ ಪ್ರತಿಯೊಬ್ಬ ಕರಕುಶಲ ಕರ್ಮಿಗಳಿಗೂ ಅವಕಾಶ ಕಲ್ಪಿಸಿದ್ದ ಮಹಾನು ದಕ್ಷ ಆಡಳಿತಗಾರ ಎಂದು ಬಣ್ಣಿಸಿದರು.ಈ ಸಂಧರ್ಭದಲ್ಲಿ ಬಿಇಒ ಆರ್ ಮಹೇಶ್, ತಹಶೀಲ್ದಾರ್ ಗುರುಪ್ರಸಾದ್, ಉಪ ತಸೀಲ್ದಾರ್ ಧನಂಜಯ್, ತಾಲ್ಲೂಕು ಸಹಾಯಕ ನಿರ್ದೇಶಕ ರವೀಂದ್ರ,ತಾಲ್ಲೂಕು ತಾಲ್ಲೂಕು ಆರೋಗ್ಯ ಅಧಿಕಾರಿ ಪ್ರಕಾಶ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮಹಾದೇವ್, ಶರಸ್ತೆದ್ದಾರ್ ನಾಗೇಂದ್ರ ಶಿಕ್ಷಣ ಸಂಯೋಜಕರಾದ ಕಂದವೇಲು, ಮುಖಂಡರುಗಳಾದ ಕಿರಣ್ ಕುಮಾರ್, ಕರಿಯಪ್ಪ, ರಾಜೂಗೌಡ, ಮಂಜೇಶ್ ಗೌಡ, ಸಿದ್ದೇಗೌಡ, ವೆಂಕಟೇಗೌಡ. ಕೃಷ್ಣೇಗೌಡ, ವೆಂಕಟೇಶ್, ಮುಖ್ಯ ಭಾಷಣಕಾರರಾದ ಶ್ರೀನಿವಾಸ್ ನಾಯ್ದು, ಇನ್ನಿತರರು ಹಾಜರಿದ್ದರು.