This is the title of the web page
This is the title of the web page

ಜೆಡಿಎಸ್ ಅಧಿಕಾರಕ್ಕೆ ತರಲು ಒಗ್ಗಟ್ಟಾಗಿ ಶ್ರಮಿಸಲು ಶಾಸಕ ಮಂಜುನಾಥ್ ಕರೆ

ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ಮಾರಮ್ಮ ದೇವಿಯ ಸನ್ನಿಧಿಯಲ್ಲಿ ಪೂಜೆ ನೆರವೇರಿಸುವ ಮೂಲಕ ರಾಜ್ಯಕ್ಕೆ ಕುಮಾರಣ್ಣ -ಮನೆ ಮನೆಗೆ ಮಂಜಣ್ಣ ಕಾರ್ಯಕ್ರಮಕ್ಕೆ ಶಾಸಕ ಅರ್. ಮಂಜುನಾಥ್ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ವಾರ್ಡಿನ ಶಕ್ತಿ ದೇವತೆ ಮಾರಮ್ಮ ದೇವಿಯ ಆಶೀರ್ವಾದ, ಜನರ ಶಕ್ತಿ, ಈ ಪಕ್ಷ ಕಟ್ಟಿದ ಮಾಜಿ ಪ್ರಧಾನಿಗಳಾದ ದೇವೇಗೌಡ ಅಪ್ಪಾಜಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣನ ಆಶೀರ್ವಾದ ಕ್ಷೇತ್ರದ ಮೇಲೆ ಇದೆ.

ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನಿರಂತರ ಕಿರುಕುಳ, ಅನುದಾನ ತಡೆಹಿಡಿದು ಈ ಕ್ಷೇತ್ರದ ಅಭಿವೃದ್ಧಿ ಕುಂದಿಸುವ ಕೆಲವರ ವಕ್ರದೃಷ್ಟಿ ಈ ಕ್ಷೇತ್ರದ ಮೇಲೆ ಇದೆ. ವಕ್ರದೃಷ್ಟಿಯ ಮೆಟ್ಟಿ ನಿಲ್ಲುವ ಶಕ್ತಿ ಈ ಕ್ಷೇತ್ರದಲ್ಲಿ ಜೆ.ಡಿ.ಎಸ್ ಪಕ್ಷದ ಪ್ರತಿ ಕಾರ್ಯಕರ್ತನಲ್ಲೂ ಇದೆ.
ಕ್ಷೇತ್ರದಲ್ಲಿ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನ ಪ್ರತಿಮನೆಗಳಿಗೂ ತಲುಪಿಸುವ ಮೂಲಕ ಜೆಡಿಎಸ್ ಪಕ್ಷವನ್ನ ಮತ್ತೊಮ್ಮೆ ಅಧಿಕಾರಕ್ಕೆತರಲು ಒಗ್ಗಟ್ಟಾಗಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಾಗಲಗಂಟೆ ವಾರ್ಡ್ ಅಧ್ಯಕ್ಷ ಹನುಮಂತರಾಯಪ್ಪ, ಕ್ಷೇತ್ರದ ಕಾರ್ಯಧ್ಯಕ್ಷ ಮುನೇಗೌಡ,ರಾಜ್ಯ ಮಾದ್ಯಮ ವಕ್ತಾರ ಚರಣ್ ಗೌಡ, ಮುಖಂಡರಾದ ದವಳಗಿರಿ ಚಂದ್ರಣ್ಣ, ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ಮಹಿಳಾ ಮುಖಂಡಾದ ಶೃತಿ ಕಿರಣ್ ,ಸದಾಶಿವ ಗುರುಪ್ರಸಾದ್,ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.