ದಾಬಸ್ ಪೇಟೆ: ಗ್ರಾಮೀಣ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಒದಗಿಸುವುದು ನನ್ನ ಮೊದಲ ಗುರಿ, ಹಿಂದುಳಿದ ಪ್ರದೇಶದ ಸಮಗ್ರ ಅನುಕೂಲತೆಗೆ ಒತ್ತು ನೀಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು. ಹೋಬಳಿಯ ಎಡೇಹಳ್ಳಿ, ಅಂಚೇಪಾಳ್ಯ, ಹಳೇ ನಿಜಗಲ್ ಗ್ರಾಮದಲ್ಲಿ, ಆರ್.ಡಿ.ಪಿ.ಆರ್. ಯೋಜನೆಯಡಿ 1.5 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುರುವಾರ ಸ್ಥಳೀಯರಿಂದ ಗುದ್ದಲಿ ಪೂಜೆ ನಡೆಸಿ, ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ, ಕಾಮಗಾರಿ ಗುಣಮಟ್ಟವನ್ನು ಸ್ಥಳೀಯ ಮುಖಂಡರು ಹೆಚ್ಚು ಗಮನ ಹರಿಸಬೇಕು ಎಂದರು.ಶಿವಗಂಗೆ ಬಳಿಯ ಗೊಲ್ಲರಹಟ್ಟಿ ಗ್ರಾಮದ ವೃದ್ದೆ ಮೇಲೆ ಚಿರತೆ ದಾಳಿ ನಡೆಸಿರುವುದನ್ನು ಮಾಧ್ಯಮಗಳ ಮುಖಾಂತರ ತಿಳಿದಿದ್ದೇನೆ, ಅರಣ್ಯಾಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಎಚ್ಚರಿಕೆ ನೀಡಿದ್ದೇನೆ, ಚಿರತೆ ಉಪಟಲಕ್ಕೆ ಕಡಿವಾಣ ಹಾಕಿ ಜೊತೆಗೆ, ದಾಳಿಗೊಳಗಾದ ವೃದ್ದೆಗೆ ಅಗತ್ಯ ಸಹಕಾರ, ಪರಿಹಾರಕ್ಕೆ ಇಲಾಖೆಗೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸೋಂಪುರ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ತೀರ್ಥಪ್ರಸಾದ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಸೋಂಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ತೀರ್ಥಪ್ರಸಾದ್, ಗ್ರಾ.ಪಂ.ಉಪಾಧ್ಯಕ್ಷೆ ಲಾವಣ್ಯ ಜಗದೀಶ್, ಹಿರಿಯರಾದ ಹೊನ್ನಗಂಗಯ್ಯ, ಅಂಚೆಮನೆ ಪ್ರಕಾಶ್, ಗ್ರಾ.ಪಂ.ಸದಸ್ಯರಾದ ನಾಗರತ್ನಮ್ಮ, ಚಿಕ್ಕಮ್ಮ, ಪ್ರೇಮ ವೆಂಕಟೇಶ್,ಮಹಾಲಕ್ಷ್ಮಮ್ಮ, ಮುಖಂಡರಾದ ವೀರಸಾಗರ ಗಂಗರುದ್ರಯ್ಯ, ಮೆಡಿಕಲ್ ಶಶಿಧರ್, ಮರಿಯಪ್ಪಗೌಡ ಇನ್ನೀತರರಿದ್ದರು.