ಮಂಡ್ಯ: ಕಳೆದ ಲೋಕಸಭಾ ಚುನಾವಣೆ ಯಲ್ಲಿ ಸ್ವಾಭಿಮಾನದ ಮಾತುಗಳನ್ನಾಡಿದ್ದ ಸಂಸದೆ ಸುಮಲಾತಾ ಈಗ ಸ್ವಾಭಿಮಾನ ಉಳಿಸಿಕೊಳ್ಳಲಿ ಎಂದು ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲೆಯ ಮಳವಳ್ಳಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ಸಂಸದೆ ಸುಮಲತಾಗೆ ಎಚ್ಚರಿಕೆ ನೀಡಿದ್ದಾರೆ. ಜೆಡಿಎಸ್ ಪರ ಕೆಲಸ ಮಾಡಲ್ಲ ಎಂದು ಕಳೆದ ಎಂಪಿ ಚುನಾ-ವಣೆಯಲ್ಲಿ ಓಪನ್ ಆಗಿ ಹೇಳಿದ್ದೆ.ಅಂದು ಸುಮಲತಾ ಪರ ನಾವು ಕೆಲಸ ಮಾಡಿದ್ದೆವು. ಇಂದು ಸುಮಲತಾ ಅವರು ಜ್ಞಾಪಕ ಮಾಡಿಕೊಳ್ಳಲಿ. ಸುಮಲತಾ ನಾನು ಹುಚ್ಚೇಗೌಡರ ಸೊಸೆ ಎಂದಿದ್ದರು.
ಹಾಗಾಗಿ ಹುಚ್ಚೇಗೌಡರ ಸ್ವಾಭಿಮಾನವನ್ನು ಕಳೆಯಬಾರದು. ನಿಮಗೆ ಎಚ್ಚರಿಕೆಯ ಬೇಡಿಕೆ ಇಡುತ್ತೇನೆ. ಈ ಮಳವಳ್ಳಿಗೆ ನೀವು ಅವಮಾನ ಮಾಡಬಾರದು. ಮಳವಳ್ಳಿಗೆ ಅವಮಾನವಾಗದಂತೆ ನಿಮ್ಮ ನಡೆ ಇರಲಿ. ಅಂದು ನೀವು ಸ್ವಾಭಿಮಾನದ ಬಗ್ಗೆ ಮಾತನಾಡಿದ್ರಲ್ಲ. ಇಂದು ನಿಜವಾದ ಸ್ವಾಭಿಮಾನ ಉಳಿಸಿಕೊಳ್ಳಬೇಕು ಎಂದಿದ್ದಾರೆ.ನಾವು ಮಂಡ್ಯದ ಗೆಲುವು ಕೇಳುತ್ತಿದ್ದೇವೆ. ತಟಸ್ಥವಾಗಿರಿ ಅಥವಾ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಕೋರಿದ್ದಾರೆ.