ಬೆಂಗಳೂರು: ಇಂದು ಗೋವಿಂದರರಾಜನಗರದಲ್ಲಿ ಡಾ.ವಿಷ್ಣುವರ್ಧನ್ ರವರ ಜನ್ಮದಿನ ಪ್ರಯುಕ್ತ ಪ್ರತಿಮೆಗೆ ಶಾಸಕ ಪ್ರಿಯಕೃಷ್ಣ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು,
ಈ ಸಂಧರ್ಭದಲ್ಲಿ ಶಾಸಕರು, ಕ್ಷೇತ್ರದಲ್ಲಿ ಹೆಚ್ಚು ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳಿದ್ದು, ಅವರ ಮತ್ತು ನನ್ನ ಆಸೆಯಂತೆ ಒಂದು ವಾರ್ಡ್ ನಲ್ಲಿ ಡಾ. ವಿಷ್ಣುವರ್ಧನ್ ಅವರ ಹೆಸರು ಇಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ, ಈಗಾಗಲೇ ಕ್ಷೇತ್ರದಲ್ಲಿ ಡಾ. ರಾಜಕುಮಾರ್ ರವರ ಗೌರಾವಾರ್ಥ ವಾರ್ಡ್ ಎಂದಕ್ಕೆ ಹೆಸರಿರಿಸಲಾಗಿದೆ. ಹಾಗೆ ಮುಂಬರುವ ದಿನಗಳಲ್ಲಿ ಡಾ . ವಿಷ್ಣುವರ್ಧನ್ ವಾರ್ಡ್ ಆದ ನಂತರ ವಿಷ್ಣುವರ್ಧನ್ ಅವರ ಜನುಮದಿನ ಕಾರ್ಯಕ್ರಮವನ್ನು ಇನ್ನೂ ಹೆಚ್ಚು ವಿಜೃಂಭಣೆ ಇಂದ ಕಾರ್ಯಕ್ರಮ ಮಾಡೋಣ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಿಯಕೃಷ್ಣ ರವರು ಹೇಳಿದರು.
“ಡಾ. ವಿಷ್ಣುವರ್ಧನ್ ವಾರ್ಡ್ ಎಂದು ನಾಮಕರಣಕ್ಕೆ ಶಾಸಕ ಪ್ರಿಯಕೃಷ್ಣ ಮನವಿ”



