ಪೀಣ್ಯ ದಾಸರಹಳ್ಳಿ: ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಸಾರ್ವಜನಿಕರಿಂದ ಯಾವುದೇ ದೂರು ಬಂದರೆ ನಿಮ್ಮನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ರಾಜಗೋಪಾಲ ನಗರ ವಾರ್ಡಿನ ಕೆಂಪೇಗೌಡ ಬಡಾವಣೆಯಲ್ಲಿ ಸುಮಾರು ಎಪ್ಪತ್ತು ಲಕ್ಷದ ಮೊತ್ತದ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಅಧಿಕಾರಿಗಳಿಗೆ ಶಾಸಕ ಎಸ್ ಮುನಿರಾಜು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಸ್ಥಳದಲ್ಲೇ ಇದ್ದು ಗುಣಮಟ್ಟದ ಕೆಲಸವನ್ನು ಮಾಡಿಸಬೇಕು ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ರೆವೆನ್ಯೂ ಬಡಾವಣೆ ಗಳಿದ್ದು ರಸ್ತೆಗಳು ಅಷ್ಟು ಕರಾರುವಕ್ಕಾಗಿ ಇರುವುದಿಲ್ಲ ವಸತಿ ಬಡವಣೆಗಳನ್ನು ಸಹ ಸಣ್ಣಪುಟ್ಟ ಕಾರ್ಖಾನೆಗಳು ಇರುವುದರಿಂದ ವಾಹನಗಳ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆಗಳು ಬೇಗ ಹಾಳಾಗುತ್ತದೆ ಆದುದರಿಂದ ಕೆಲಸದ ಸಮಯದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ರಸ್ತೆಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹ ಮೂರ್ತಿ, ಮಾಜಿ ಅಧ್ಯಕ್ಷ ನಾಗೇಶ್, ಸ್ಥಳಿಯ ಮುಖಂಡರು ಹಾಗೂ ಉದ್ಯಮಿ ದಿನೇಶ್, ಮುಖಂಡರಾದ ಕಂಪ್ಯೂಟರ್ ವಿಜಯ್ ,ವಿಠ್ಠಲ್ ಬಿರಾದರ್, ಹರೀಶ್, ರಾಮಣ್ಣ, ರಾದಕ್ರಷ್ಣಶೆಟ್ಟಿ, ಮಹಿಳಾ ಮುಖಂಡರು ಬಿಬಿಎಂಪಿ ಅಭಿಯಂತರರಾದ ನಾಗಭೂಷಣ್, ಗುತ್ತಿಗೆದಾರರಾದ ಶಿವರಾಮ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.