ಬಂಗಾರಪೇಟೆ : ಯರಗೋಳ್ ಡ್ಯಾಂನ ನೀರನ್ನು ಪಟ್ಟಣದ ಶೇ ೬೦ರಷ್ಟು ಜನರಿಗೆ ಮಾತ್ರ ಸರಬರಾಜು ಮಾಡುಲಾಗುತ್ತಿದೆ ಉಳಿದ ೪೦ ರಷ್ಟು ಭಾಗದ ಜನರಿಗೆ ಪೈಪ್ ಲೈನ್ ಅಳವಡಿಸಿ ಪೂರೈಸಲು ೧೩.೫ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದಲ್ಲಿ ಅಮೃತ್ ೨.೦ ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಕಲ್ಪಿಸುವ ೧೪.೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು. ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್ಟಿಯನ್ನು ಇಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಕರ್ಯರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಮೋದಿಯವರು ಮತ್ತು ನರ್ಮಲಾ ಸೀತಾರಾಮನ್ರವರೇ ದಿನಬಳಕೆಯ ಅಗತ್ಯ ವಸ್ತುಗಳಿಗೆ ಜಿಎಸ್ಟಿಯನ್ನು ವಿಧಿಸಿ, ಜನಸಾಮಾನ್ಯರು ತೊಂದರೆ ಅನುಭವಿಸುವಂತೆ ಮಾಡಿದರು.
ಈ ಹಿಂದೆ ಇದ್ದಂತಹ ಮನಮೋಹನ್ ಸಿಂಗ್ ಜಿಎಸ್ಟಿ ಹಾಕಿಲ್ಲ. ಜಿಎಸ್ಟಿ ಹಾಕಿದ್ದು, ನೋಟ್ ಬ್ಯಾನ್ ಮಾಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಮೋದಿ ರ್ಕಾರ. ಈಗ ಜಿಎಸ್ಟಿಯನ್ನು ಕಡಿಮೆ ಮಾಡಿರುವುದಕ್ಕೆ ಸ್ವಾಗತ ಬಯಸುತ್ತೇನೆ. ಸಂಭ್ರಮಾಚರಣೆ ಮಾಡಿರುವುದಕ್ಕೆ ಏನೂ ಸಾಧನೆ ಮಾಡಿಲ್ಲ. ಕೈಗಾರಿಕೆಗಳನ್ನು ಆರಂಭಿಸಿ ಯುವಕರಿಗೆ ಉದ್ಯೋಗ ಕಲ್ಪಿಸಿಲ್ಲ. ಬೆಲೆಯನ್ನು ಇಳಿಕೆ ಮಾಡಲಿಲ್ಲ. ಇದ್ಯಾವುದನ್ನೂ ಮಾಡದೇ ಸಂಭ್ರಮಾಚರಣೆ ಮಾಡಿ ಜನರ ದಿಕ್ಕು ತಪ್ಪಿಸಬಾರದು. ಜಿಎಸ್ಟಿಯಿಂದ ಇದೂವರೆಗೂ ಎಷ್ಟು ಕೋಟಿ ಹಣವನ್ನು ಜನರಿಂದ ಪಡೆದಿದ್ದಾರೆ ಅದಕ್ಕೆ ಲೆಕ್ಕ ನೀಡಬೇಕು.
ಇಡೀ ದೇಶದಲ್ಲಿ ಮಹಾರಾಷ್ಟ್ರ ನಂತರ ಹೆಚ್ಚು ಜಿಎಸ್ಟಿ ಕಟ್ಟುತ್ತಿರುವುದು ಬೆಂಗಳೂರು ಮತ್ತು ರ್ನಾಟಕ ರಾಜ್ಯವಾಗಿದ್ದು, ಇದೂವರೆ ವಸೂಲಿ ಮಾಡಿರುವ ಲಕ್ಷಾಂತರ ಕೋಟಿ ಹಣದಲ್ಲಿ ರಾಜ್ಯದ ಅಭಿವೃದ್ಧಿ ಕರ್ಯಗಳಿಗೆ ಅನುದಾನ ನೀಡುವಂತೆ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಎಲ್ಲಾ ಸಂಸದರು ಒಟ್ಟಾಗಿ ಕೇಂದ್ರ ರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು. ಸಿದ್ದರಾಮಯ್ಯ ಸಿಎಂ ಆದ ಮೇಲೆ ಯರಗೋ ಡ್ಯಾಂ ಅನ್ನು ಲೋಕರ್ಪಣೆ ಮಾಡುವ ಮೂಲಕ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಒದಗಿಸಿದ್ದಾರೆ. ಇದರ ಮೂಲಕ ಪಟ್ಟಣದಲ್ಲಿ ಈಗ ಶೇ ೬೦ರಷ್ಟು ಮಾತ್ರ ಮನೆಗಳಿಗೆ ನೀರನ್ನು ಒದಗಿಸಲಾಗುತ್ತಿತ್ತು. ಮುಂದಿನ ೨೦ ರ್ಷಗಳ ಪಟ್ಟಣದ ಅಭಿವೃದ್ಧಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಡೀ ಪಟ್ಟಣಕ್ಕೆ ಯರಗೊಳ್ ನೀರನ್ನು ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ರವರಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ೧೫ ಲಕ್ಷ ಲೀಟರ್ ಸಾರ್ಥ್ಯದ ಒವರ್ ಟ್ಯಾಂಕ್ ನರ್ಮಿಸಲು ಮತ್ತು ೫೦ ಕಿಮೀನಷ್ಟು ಪೈಪ್ ಲೈನ್ ಅಳವಡಿಸಲು ಒಟ್ಟು ೧೮ ಕೋಟಿ ಅನುದಾನವನ್ನು ನೀಡಿದ್ದಾರೆ. ಒಟ್ಟು ೪೫೦೦ ಮನೆಗಳಿಗೆ ಕುಡಿಯುವ ನೀರಿನ ಸಂರ್ಕ ಕಲ್ಪಿಸಲಾಗುತ್ತದೆ ಎಂದರು.
೭೫ ಲಕ್ಷ ಜನಸಂಖ್ಯೆಗೆ ತಕ್ಕಂತೆ ಪೈಪ್ ಲೇನ್ ಡಿಸೇನ್ ಮಾಡಲಾಗಿದ್ದು, ಎಲ್ಲೆಲ್ಲಿ ಹಳೇ ಪೈಪ್ ಲೇನ್ ಹಾಳಾಗಿದೆಯೋ ಅದನ್ನೆಲ್ಲಾ ಬದಲಿಸಲಾಗುತ್ತದೆ. ಕಾಮಗಾರಿ ನಡೆಯುವ ಸಮಯದಲ್ಲಿ ಎಲ್ಲಿಯಾದರೂ ಸಮಸ್ಯೆಯಾದರೆ ನಾಗರೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ೧೮ ಕೋಟಿ ಜೊತೆಗೆ ಮುಖ್ಯಮಂತ್ರಿಗಳು ಪಟ್ಟಣದ ವಿವಿಧ ಅಭಿವೃದ್ಧಿ ಕರ್ಯಗಳಿಗೆ ೨೩ ಅನುದಾನವನ್ನು ಬಿಡುಗಡೆ ಮಾಡಿದ್ದು, ಅದರ ಕಾಮಗಾರಿಗಳಿಗೆ ಶೀಘ್ರವಾಗಿ ಚಾಲನೆ ನೀಡಲಾಗುತ್ತದೆ ಎಂದರು.