ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್ ಆರ್.ಜಿ.ಐ.ಕಾಲೋನಿ ಅಶ್ವಥ್ ಕಟ್ಟೆ ರೋಡ್ ಮತ್ತು ದೇವಸ್ಥಾನ ರಸ್ತೆ ಡಾಂಬರೀಕರಣ ಕಾಮಗಾರಿ, ದಯಾನಂದನಗರ ೧ನೇ ರಸ್ತೆ ಮತ್ತು ೧ನೇ ಮುಖ್ಯರಸ್ತೆ ಡಾಂಬರೀಕರಣ, ಚರಂಡಿ ಹೂಳು ತೆಗೆಯುವ ಕಾಮಗಾರಿ, ಶ್ರೀರಾಂಪುರ ೭ನೇ ಮುಖ್ಯರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಸುರೇಶ್ ಕುಮಾರ್ ರವರು, ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಮುನಿರಾಜುರವರು ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಜಿಬಿಎ ಅಧಿಕಾರಿಗಳು ಮತ್ತು ಸ್ಥಳೀಯ ಬಿಜೆಪಿ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತ, ವಿದ್ಯಾವಂತರು ಇರುವ ಕ್ಷೇತ್ರ , ಜನರ ಆಶಯದಂತೆ ಮತ್ತು ಸಾರ್ವಜನಿಕರಿಗೆ ಅವಶ್ಯಕತೆ ಇರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗಬೇಕು. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ನೇರವಾಗಿ ಅಲಿಸಿ ತತಕ್ಷಣ ಪರಿಹಾರ ಸಿಗಬೇಕು ಎಂಬ ನಿಟ್ಟಿನಲ್ಲಿ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ಮತ್ತು ದಿನಕ್ಕೂಂದು ವಾರ್ಡ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಎರಡು ಜನಸ್ಪಂದನಾ ಕಾರ್ಯಕ್ರಮಗಳಿಂದ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೇ ಎಂದು ಹೇಳಿದರು.
ಜನರ ಆಶಯದಂತೆ ಕಾಮಗಾರಿ ಅನುಷ್ಠಾನ, ಅನುದಾನ ಸಮರ್ಪಕ ಬಳಕೆ: ಶಾಸಕ ಎಸ್.ಸುರೇಶ್ ಕುಮಾರ್



