ಹೊಸಕೋಟೆ: ತಾಲೂಕಿನಲ್ಲಿ 5 ವರ್ಷದೊಳಗಿನ ಸುಮಾರು 28 ಸಾವಿರ ಮಕ್ಕಳಿದ್ದು ಪ್ರತಿಯೊಬ್ಬ ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕುವ ಮೂಲಕ ಪೊಲಿಯೋ ಮುಕ್ತಗೊಳಿಸೋಣ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಪಲ್ಸ್ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ 2007 ರಲ್ಲಿ ಕೊನೆಯ ಪೋಲಿಯೊ ಪ್ರಕರಣ ಕಂಡು ಬಂದಿದ್ದು ನಂತರ ರಾಜ್ಯ ಪೊಲಿಯೋ ಮುಕ್ತವಾಗಿದ್ದು ದೇಶದಲ್ಲಿ 2014ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಭಾರತ ದೇಶ ಪೋಲಿಯೊ ಮುಕ್ತವಾಗಿದೆ ಎಂದು ಘೋಷಿಸಿದೆ,
ಆದರೂ ನೆರೆಯ ಅಪಘಾನಿಸ್ಥಾನ, ಪಾಕಿಸ್ಥಾನಗಳಲ್ಲಿ ಇನ್ನೂ ಪೋಲಿಯೊ ವೈರಸ್ ಇರುವ ಕಾರಣ ವಿದೇಶಿ ಪ್ರಯಾಣಿಕರಿಂದ ವೈರಾಣು ಭಾರತಕ್ಕೆ ಬಂದು ಯಾರಿಗೂ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ವರ್ಷ ಪೊಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದರು.
ನೋಡಲ್ ಅಧಿಕಾರಿ ನಾಗೇಶ್ ಮಾತನಾಡಿ ತಾಲೂಕಿನಲ್ಲಿ 5 ವರ್ಷದೊಳಗಿನ 28,804 ಮಕ್ಕಳಿದ್ದು ಅವರಿಗೆ ಪೋಲಿಯೊ ಲಸಿಕೆ ಹಾಕಲು 115 ಬೂತ್ ಗಳ ವ್ಯವಸ್ತೆ ಮಾಡಿ 512 ಅಶಾ ಕಾರ್ಯಕರ್ತರನ್ನು ನೇಮಿಸಲಾಗಿದೆ.
ಇದರ ಜೊತೆ ಎಂವಿಜೆ ನರ್ಸಿಂಗ್ ಕಾಲೇಜು ಹಾಗೂ ಶ್ರೀಲಕ್ಷ್ಮಿದೇವಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಹ ಈ ಮೂರು ದಿನ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರುಗಳಾದ ಕೇಶವಮೂರ್ತಿ, ಗೌತಮ್, ರೋಟರಿ
ಸಂಸ್ಥೆಯ ನಟರಾಜ್, ಬಚ್ಚಣ್ಣ, ಸೋಮ ಶೇಖರ್, ಮುಖಂಡರುಗಳಾದ ಕಿರಣ್, ಆರ್ಟಿಸಿಗೋವಿಂದರಾಜ್, ತಾಲೂಕು ವೈದ್ಯಾಧಿಕಾರಿ
ಡಾ: ಉಮೇಶ್, ಆಸ್ಪತ್ರೆಯ ಮುಖ್ಯ ಆಡಳಿತಾ ಧಿಕಾರಿ ಡಾ: ಸಿ.ಎಸ್.ಸತೀಶ್ಕುಮಾರ್, ಡಾ: ರಾಘವೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಜಿ.ಶಿವಕುಮಾರ್, ಇನ್ನಿತರರು ಭಾಗವಹಿಸಿದ್ದರು.