ಹೊಸಕೋಟೆ: ವಿಶ್ವಕರ್ಮ ಸಮುದಾಯದ ಅಭಿವೃದ್ದಿ ದೃಷ್ಠಿಯಿಂದ ಉಪಾರಹಳ್ಳಿ ಬಳಿ 4 ಗುಂಟೆ ಜಮೀನನ್ನು ಈಗಾಗಲೆ ಖರೀದಿಸಿದ್ದು ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನೆರವನ್ನು ಒದಗಿಸಲಾಗುವುದು. ಆದ್ದರಿಂದ ತ್ವರಿತವಾಗಿ ಸಮುದಾಯ ಭವನ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದಪಡಿಸಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿಂದುಳಿದವರ ಹಲವಾರು ಸಮುದಾಯಗಳ ಪೈಕಿ ವಿಶ್ವಕರ್ಮ ಸಮುದಾಯ ಕೂಡ ಒಂದಾಗಿದೆ. ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಕೂಡ ಅಭಿವೃದ್ದಿ ಹೊಂದಬೇಕಾಗಿದೆ.
ಈ ನಿಟ್ಟಿನಲ್ಲಿ ಕೆ.ಪಿ.ನಂಜುಂಡಿ ಅವರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ಸಹ ನಡೆಯುತ್ತಿದೆ. ಆದ್ದರಿಂದ ಸಮುದಾಯದ ಹೋರಾಟಕ್ಕೆ ನನ್ನ ಬೆಂಬಲ ಸಹ ಸದಾ ಇರುತ್ತದೆ. ಪ್ರಮುಖವಾಗಿ ತಾಲೂಕಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ಆಸೆ ಮುಖಂಡರಿಗಿದ್ದು, ಈಗಾಗಲೆ ಉಪ್ಪಾರಹಳ್ಳಿ ಬಳಿ ಖರೀದಿ ಮಾಡಿರುವ 4 ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದಪಡಿಸಿ, ನನ್ನ ವೈಯುಕ್ತಿಕವಾಗಿ ಜೊತೆಗೆ ಸರ್ಕಾರದಿಂದ ಸಹ ಅನುದಾನ ದೊರಕಿಸಿಕೊಡುವ ಕಾಂರ್ಮಾಡಲಾಗುವುದುಎಂದರು.
ವಿಶ್ವಕರ್ಮ ಸಮುದಾಯದ ಮುಖಂಡರು, ಮಾಜಿ ಗ್ರಾಪಂ ಸದಸ್ಯ ಆನಂದಾಚಾರಿ ಮಾತನಾಡಿ ಸಿದ್ದರಾಮಯ್ಯನವರು 2014ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂಧರ್ಭದಲ್ಲಿ ವಿಶ್ವಕರ್ಮ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸುವಂತೆ ಮಾಡಿದ್ದರು. ಪ್ರಮುಖವಾಗಿ ಗಂಡು ಹೆಣ್ಣನ್ನು ಬೆಸೆಯುವ ತಾಳಿ ಮಾಡುವ ಹಾಗೂ ಜಾತಿ ಧರ್ಮ ಎನ್ನದೆ ವಿವಿಧ ಶಿಲ್ಪಗಳನ್ನು ಕೆತ್ತನೆ ಮಾಡುವ ಮೂಲಕ ಕಲ್ಲಿಗೆ ಸುಂದರ ರೂಪ ಕೊಡುವ ಶಿಲ್ಪಿ ಕೆಲಸವನ್ನು ಸಹ ಮಾಡುವ ಶಕ್ತಿ ನಮ್ಮ ಸಮುದಾಯಕ್ಕೆ ದೇವರು ಕೊಟ್ಟಿದ್ದಾನೆ. ಆದ್ದರಿಂದ ನಮ್ಮ ಸಮುದಾಯದ ಅಭಿ ವೃದ್ದಿಗೂ ಕೂಡ ಎಲ್ಲರ ಸಹಕಾರ ಬೇಕು ಎಂದರು.
ತಹಸೀಲ್ದಾರ್ ವಿಜಯಕುಮಾರ್, ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಲಕ್ಷ್ಮೀನಾರಾಯಣ್, ಯುವ ಘಟಕದ ಅಧ್ಯಕ್ಷ ಸುರೇಶ್ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ವಿಶ್ವಕರ್ಮರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
Leave a Review