ಹೊಸಕೋಟೆ: ನಗರದ ಹಳೇ ಟೌನ್ನಲ್ಲಿ ಪ್ರತಿಮೂರು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜುಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದ್ದು ಸುಮಾರು 25-30 ವರ್ಷಗಳಿಂದ ಅನುಭವಿಸಿದ ಸಮಸ್ಯೆಗೆ ಮುಕ್ತಿ ದೊರಕಿದಂತಾಗಿದೆ. ಹಿಂದೆ 8 ರಿಂದ 9ದಿನಗಳಿಗೊಮ್ಮೆ ಸರಬರಾಜುತ್ತಿದ್ದ ಕಾರಣ ಬಹಳಷ್ಟು ನಿವಾಸಿಗಳು ಟ್ಯಾಂಕರ್ಗಳ ಮೂಲಕ ಹಣ ಪಾವತಿಸಿ ನೀರು ಪಡೆಯಬೇಕಾಗಿತ್ತು.
ಇದೇರೀತಿ ನಗರದ ವಿಶ್ವೇಶ್ವರಯ್ಯ ಬಡಾವಣೆ ಬಾಗದಲ್ಲಿಯೂಸಹ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರಿನಸರಬರಾಜಾಗಲಿದೆ. ಇದಕ್ಕಾಗಿ ನೂತನ ಕೊಳೆವೆಬಾವಿಗಳನ್ನು ಕೊರೆಸಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ 21ನೇ ವಾರ್ಡ್ನ ಕನP ನಗರದಲ್ಲಿನೂತನ ಕೊಳವೆ ಬಾವಿ ಕೊರೆಸುವ ಕಾಮಗಾರಿಗೆಚಾಲನೆ ನೀಡಿ ಮಾತನಾಡಿದ ಅವರು ತುರ್ತುಆದ್ಯತೆ ಮೇರೆಗೆ ಕೊಳವೆ ಬಾವಿ ಕೊರೆಸುವ ಯೋಜನೆಯಡಿ ನಗರದ ನೂತನ ಬಡಾವಣೆಗಳಲ್ಲಿ 11 ಕೊಳವೆ ಬಾವಿ ಕೊರೆಸಲು ಯೋಜನೆ ರೂಪಿಸಲಾಗಿದ್ದು ಇಂದು ಚಾಲನೆ ನೀಡಲಾಗಿದೆ,
ಇದರಿಂದ ಹೊಸಕೋಟೆಯ ನೂತನ ಬಡಾವಣೆಗಳ ಸಾರ್ವಜನಿಕರಿಗೆ ಇನ್ನು ಕೆಲವೇ ದಿನಗಳಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರಿನ ಸರಬರಾಜು ಮಾಡಲುನಗರಸಭೆಗೆ ಆದೇಶಿಸಲಾಗಿದ್ದು ಕೊಳವೆಬಾವಿಯಲ್ಲಿ ದೊರೆಯುವ ನೀರಿನ ಮೂಲಗಳಿಂದ ನೀರಿನ ಸಂಗ್ರಹಣೆಗಾಗಿ ನಿರ್ಮಿಸಿರುವ ಟ್ಯಾಂಕ್ಗಳಿಗೆ ಪಂಪ್ ಮಾಡಿ ಪ್ರತಿ ಮನೆಗೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು. ಬೇಸಿಗೆಅವಧಿಯಲ್ಲಿ ನೀರು ಸರಬರಾಜಿಗೆ ಯಾವುದೇತೊಂದರೆಯಾಗದಂತೆ ಈಗಲೇ ಕ್ರಿಯಾಯೋಜನೆಯನ್ನು ರೂಪಿಸಿ ಜಿಲ್ಲಾ ಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿವಾಸಿಗಳ ಪ್ರಶಂಸೆ: ಶಾಸಕರು ನೀರು ಸರಬ ರಾಜನ್ನು ವೈಜ್ಞಾನಿಕವಾಗಿ ಮಾಡಲು ಯೋಜನೆ ರೂಪಿಸಿರುವ ಕಾರಣ ಬಹಳಷ್ಟು ದಿನಗಳ ಸಮಸ್ಯೆಗೆಪರಿಹಾರ ದೊರಕಿದೆ. ಶಾಸಕರ ಇಂತಹ ಜನಪರಕಾರ್ಯ ಅಭಿನಂದನಾರ್ಹ ಎಂದು ಮೇಲಿನಪೇ ಟೆಯ ನಿವಾಸಿ ರಾಜಶೇಖರ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕೇಶವಮೂರ್ತಿ, ಗೌತಮ್, ಮಂಜುನಾಥ್, ಜಮುನಾ ಹರೀಶ್, ಮುಖಂಡರಾದ ಶ್ರೀಧರ್, ಗೋಪಾಲ್, ವಿಜಯ ಕುಮಾರ್ ಮುನಿಆಂಜಿ, ಟಿ.ಎಸ್. ರಾಜಶೇಖರ್, ನಗರಸಭೆ ಪೌರಾಯುಕ್ತ ಜûಹೀರ್ ಅಬ್ಬಾಸ್, ಇಂಜಿನಿಯರ್ ಗೌತಮ್ ಮುಂತಾದವರು ಹಾಜರಿದ್ದರು.