ಹೊಸಕೋಟೆ: ದಾನಿಗಳಿಂದ ಶಾಲೆಗೆ ಪಡೆದ ಸೌಲಭ್ಯಗಳನ್ನು ಸಾರ್ಥಕಪಡಿಸಲು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಉಳಿಸಿಕೊಳ್ಳುವುದು ಸಹ ಬಹಳ ಮುಖ್ಯವಾದುದಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಅವರು ನಗರದ ಕೆ.ಆರ್.ರಸ್ತೆಯಲ್ಲಿರುವ ಜಿಕೆಬಿಎಂಎಸ್ ಶಾಲೆಯ ಆವರಣದಲ್ಲಿ ಕೆ.ಆರ್.ಪುರಂ ಬಳಿಯ ಗಾರ್ಡನ್ ಸಿಟಿ ಕಾಲೇಜಿನ ಸಂಸ್ಥಾಪಕ ಜೋಸೆಫ್ ತಮ್ಮ ಸ್ವಂತ ಹಣದಿಂದ 1.5 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ 10 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸುಮಾರು 120 ವರ್ಷಗಳ ಹಿಂದೆ ನಗರದವೀರಶೈವ ಜನಾಂಗದ ಚಟ್ಟೆ ಬಸಪ್ಪನವರು ಈ ಶಾಲೆಗೆ 4 ಎಕರೆ ಜಾಗವನ್ನು ದಾನವಾಗಿ ನೀಡಿದ್ದು ಇಂದು ಈ ಶಾಲೆಯಲ್ಲಿ 800 ಮಕ್ಕಳು ವಿದ್ಯೆ ಕಲಿಯುತಿದ್ದಾರೆ, ಬಹಳಷ್ಟು ಸ್ವಯಂಸೇವಾ ಸಂಸ್ಥೆಗಳು ಈ ಶಾಲೆಗೆ ಹಲ
ವಾರು ರೀತಿಯಲ್ಲಿ ಸಹಾಯ ಮಾಡಿದ್ದು ಅವುಗಳಲ್ಲಿ ಕೆಲವು ಸವಲತ್ತುಗಳು ಮಾತ್ರ ಉಳಿದಿದ್ದು.
ಇನ್ನುಳಿದ ಸವಲತ್ತುಗಳು ಹಾಳಾಗಿವೆ ಎಂದ ಅವರು ದಾನಿಗಳು ನೀಡುವ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ಜೋಪಾನವಾಗಿ ಬಳಸಿಕೊಳ್ಳಿ ಎಂದು ಶಾಲಾ ಆಡಳಿತ ಮಂಡಳಿಯವರಿಗೆ ಕಿವಿಮಾತು ಹೇಳಿದರು.ಲೋಕಸಭಾ ಸದಸ್ಯ ಬಿ.ಎನ್.ಬಚ್ಚೇಗೌಡ ಮಾತನಾಡಿ ಬಾಲ್ಯದಲ್ಲಿ ನಾನೂ ಸಹ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು ನನ್ನ ಹೆಸರಿನಲ್ಲಿ 10 ಬ್ಲಾಕ್ ಗಳ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ.
ತಮ್ಮ ಕಲಿಕೆಯ ಸಂದರ್ಭದ ಕೆಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು ಇಂದು ಈ ಶಾಲೆಯಲ್ಲಿ 800 ಮಕ್ಕಳು ಓದುತಿದ್ದು ಅದರಲ್ಲಿ ಹೆಣ್ಣು ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಶಾಲೆ ಹೊಂದಿರುವ ಮೂಲಭೂತ ಸೌಲಭ್ಯಗಳಷ್ಟೇ ಅಲ್ಲದೆ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಂದ ಗೌರವವಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಈ ಶಾಲೆಯು ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ಹೆಗ್ಗಳಿಕೆಯನ್ನು ಹೊಂದಿದೆ.
ಈಗಾಗಲೆ ತಾಲೂಕಿನಲ್ಲಿ ಖಾಸಗಿ ಸಂಸ್ಥೆಗಳಿಂದ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ 15 ಕೋಟಿ ರೂ.ಗಳ ಅನುದಾನವನ್ನು ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ತರಲಾಗಿದ್ದು ಇದರ ಕೀರ್ತಿ ಈ ತಾಲೂಕಿನ ಶಾಸಕ ಶರತ್ ಬಚ್ಚೇಗೌಡರಿಗೆ ಸಲ್ಲುತ್ತದೆ ಎಂದರು.
ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಸಂಸ್ಥಾಪಕ ಜೋಸೆಫ್ ಮಾತನಾಡಿ ನಾನೂ ಸಹ ಕನ್ನಡ ಮಾದ್ಯಮದಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ.
ನನ್ನ ಗುರುಗಳು ಆ ಕಾಲದಲ್ಲಿ ಹತ್ತಾರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದು ನಮಗೂ ಬುದ್ದಿ ಮಾತು ಹೇಳುತಿದ್ದರು, ನಿಮ್ಮಲ್ಲಿ ಯಾರಾದರೂ ಒಬ್ಬರು ನೂರಾರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಕೆಲಸಕ್ಕೆ ಮುಂದಾದಲ್ಲಿ ನನ್ನ ಜೀವನ ಸಾರ್ಥಕ ಎಂದಿದ್ದು, ಅದರಂತೆ ನಾನು ಗಾರ್ಡನ್ ಸಿಟಿ ಕಾಲೇಜು ಸ್ಥಾಪಿಸಿದ್ದು ಅದರಲ್ಲಿ ಸುಮಾರು 82 ದೇಶದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತಿದ್ದಾರೆ ಹಾಗೂ ತಾಲೂಕಿನ ಚಿಕ್ಕನಹಳ್ಳಿ ಬಳಿ ಗಾರ್ಡನ್ ಸಿಟಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದ್ದು ತೆರೆಯಲಿದ್ದು ಲಕ್ಷಾಂತರ ಮಕ್ಕಳು ಉನ್ನತ ವ್ಯಾಸಂಗ ಪಡೆಯಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗಾರ್ಡನ್ ಸಿಟಿ ಕಾಲೇಜಿನ ಕ್ರಿಸ್ಟೋ ಜೋಸೆಫ್, ಕೇಶವ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎಸ್. ರಾಜ
ಕುಮಾರ್, ಸ್ಥಳ ದಾನಿಗಳಾದ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ನಗರಸಭೆಆಯುಕ್ತ ಜಹೀರ್ ಅಬ್ಬಾಸ್, ಯೋಜನಾ
ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ.ವಿಜಯಕುಮಾರ್, ಮುಖಂಡರಾದ ಸಿ.ರುದ್ರಾರಾಧ್ಯ, ಮುಖ್ಯ ಶಿಕ್ಷಕಿ ಗ್ಲಾಡಿಯಸ್ ಎಬ್ರೇಶಿಯ, ಶಿಕ್ಷಕರುಗಳು ಹಾಜರಿದ್ದರು.