ಹೊಸಕೋಟೆ: ಇತ್ತೀಚೆಗೆ ತಾಲ್ಲೂಕಿನ ಗಣಗಲು ಗ್ರಾಮದಲ್ಲಿ ಸಿಡಿಲು ಬಡಿತದಿಂದ ಮೃತಪಟ್ಟ ರತ್ನಮ್ಮ (62) ಕುಟುಂಬಕ್ಕೆ ಶಾಸಕ ಶರತ್ ಬಚ್ಚೇಗೌಡ ಸರಕಾರದಿಂದ 4 ಲಕ್ಷ ರೂ.ಗಳ ಪರಿಹಾರ ಧನ, ಮೃತಪಟ್ಟ ಕುರಿಗಳಿಗೆ ರೂ. 1.20 ಲಕ್ಷ ರೂ.ಗಳ ಪರಿಹಾರವನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಮೇ 3ರಂದು ಗಣಗಳು ಗ್ರಾಮದಲ್ಲಿ ಕುರಿಗಾಯಿ ರತ್ನಮ್ಮ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಮರದ ಕೆಳಗಡೆ ಕುರಿಗಳೊಂದಿಗೆ ಆಶ್ರಯ ಪಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು ಸಾವನ್ನಪ್ಪಿರುವುದು ದುರದೃಷ್ಟಕರ. ಮಹಿಳೆಯೊಂದಿಗೆ ಸುಮಾರು 40 ಕುರಿಗಳು ಸಹ ಮೃತಪಟ್ಟಿದ್ದವು.
ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಿ ಮೃತ ಮಹಿಳೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ 4 ಲಕ್ಷ ರೂ.ಗಳನ್ನು ಪರಿಹಾರವಾಗಿಯೂ, ಮೃತಪಟ್ಟ ಕುರಿಗಳಿಗೆ 1.2 ಲಕ್ಷ ರೂ. ಒಟ್ಟು 5.2 ಲಕ್ಷ ರೂ.ಗಳ ಚೆಕ್ನೊಂದಿಗೆ ಸಾಂತ್ವಾನ ಪತ್ರವನ್ನು ಮೃತ ರತ್ನಮ್ಮಳ ಗಂಡ ಚಿಕ್ಕಣ್ಣರವರಿಗೆ ನೀಡಿದರು. ವಿತರಿಸಲಾಗಿದೆ.
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳ ಶ್ರಮದಿಂದಾಗಿ ಘಟನೆ ಸಂಭವಿಸಿದ ಮೂರು ದಿನಗಳೊಳಗಾಗಿ ಪರಿಹಾರ ಮಂಜೂರು ಮಾಡಲಾಗಿದ್ದು, ಕುಟುಂಬಕ್ಕೆ ಇದು ಆಸರೆಯಾಗಲಿದೆ. ಇನ್ನೂ ಪ್ರತಿ ಕುರಿಗೆ 5 ಸಾವಿರ ರೂ.ಗಳಂತೆ 2 ಲಕ್ಷ ರೂ.ಗಳ ಪರಿಹಾರ ನೀಡಬೇಕಾಗಿದ್ದು ಶೀಘ್ರದಲ್ಲಿಯೇ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಡಿವೈಎಸ್ಪಿ ಮಲ್ಲೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಕೇಶವಮೂರ್ತಿ, ಸದಸ್ಯರಾದ ಕೊರಳೂರು ಸುರೇಶ್, ಎಚ್.ಎಂ.ಸುಬ್ಬರಾಜು, ಮಾಜಿ ಅಧ್ಯಕ್ಷ ವಿ.ವಿಜಯಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಮುನಿಯಪ್ಪ, ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎ.ಕೃಷ್ಣ ಇನ್ನಿತರರು ಹಾಜರಿದ್ದರು.