ಬಂಗಾರಪೇಟೆ: ರಾಜ್ಯಸರ್ಕಾರ ಗ್ಯಾರೆಂಟಿಗಳನ್ನು ನೀಡಿ ಅಭಿವೃದ್ಧಿ ಕಾಮಗಾರಿ ಮಾಡಲು ಹಣ ಇಲ್ಲ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ನೂರಾರು ಕೋಟಿರೂಗಳ ಕಾಮಗಾರಿ ಪ್ರಗತಿಯಲ್ಲಿದೆ ಅಭಿವೃದ್ಧಿಗೆ ಇದೇ ಸಾಕ್ಷಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಹೋಬಳಿಯ ೯೪ ಕೋಟಿರೂಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿ ಮತ್ತು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಾಗಿ ಹಣ ಖರ್ಚು್ಚ ಮಾಡಿ ಅಭಿವೃದ್ಧಿ ಮಾಡಲು ಸರ್ಕಾರದಲ್ಲಿ ಹಣ ಇಲ್ಲ ಎಂದು ಆರೋಪಿಸುವ ವಿರೋಧ ಪಕ್ಷದವರಿಗೆ ಕಣ್ಣು ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ನುಡಿದಂತೆ ನಡೆದಿದ್ದೇವೆ, ಐದು ಗ್ಯಾರೆಂಟಿಗಳನ್ನು ನೀಡುತ್ತಿದ್ದೇವೆ. ೧೩ ವರ್ಷಗಳ ನನ್ನ ಅಧಿಕಾರವಧಿಯಲ್ಲಿ ಸದಾ ಕಾಲ ನಿಮ್ಮ ಸೇವಕನಾಗಿ, ನಿಮ್ಮ ಮನೆಯ ಮಗನಾಗಿ ಈ ಕ್ಷೇತ್ರದ ಜನತೆಯ ಸೇವೆ ಮಾಡುವ ಭಾಗ್ಯ ಕೊಡಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆಂದರು.
ಡಿಸಿಸಿ ಬ್ಯಾಂಕ್ನಿಂದ ಮಹಿಳೆಯರಿಗೆ ಸಾಲ ನೀಡಲಾಗುತ್ತಿತ್ತು, ಆದರೆ ಅದಕ್ಕೆ ಬೆಂಕಿ ಹಚ್ಚಿ ಸಾಲ ನೀಡದಂತೆ ಮಾಡಿದ್ದಾರೆ, ಡಿಸಿಸಿ ಬ್ಯಾಂಕ್ ಚುನಾವಣೆ ನಡೆದ ನಂತರ ಮಹಿಳಾ ಸಂಘಗಳಿಗೆ ಬಡ್ಡಿರಹಿತ ನೀಡಲಾಗುವುದೆಂದರು.
ಕೇಂದ್ರ ಸರ್ಕಾರ ಬೆಲೆ ಏರಿಕೆಯೊಂದೆ ಅವರ ಸಾಧನೆಯಾಗಿದೆ. ನರೇಗಾ ಕಾಮಗಾರಿ ನಿಲ್ಲಿಸಿದ್ದಾರೆ. ಜೀ ರಾಮ್ ಜೀ ಯೋಜನೆ ಜಾರಿಗೆ ಮಾಡಿದ್ದು, ಗ್ರಾಮಗಳಲ್ಲಿ ಕೂಲಿ ಸಿಗದಂತೆ ಮಾಡಿದ್ದಾರೆ. ಯಾವುದೇ ಕಾಮಗಾರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆರೋಪಿಸಿದರು.
ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿಯೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು, ರಸ್ತೆ, ಚರಂಡಿ, ಐಮಾಸ್ ದೀಪ, ಶುದ್ದ ಕುಡಿಯುವ ನೀರಿನ ಘಟಕಗಳು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಮುAಬರುವ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಶಾಸಕ ಈ ವೇಳೆ ವರಾಜಿ ಎಂ.ನಾರಾಯಣಸ್ವಾಮಿ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗಾರಾಜ್, ಮುಖಂಡರಾದ ಮಹದೇವ್, ಎ.ಬಾಬು, ಎಚ್.ಕೆ.ನರಾಯಣಸ್ವಾಮಿ, ರಘುನಾಥ್ ಮಾತನಾಡಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಕೊಂಡಾಡಿದರು. ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು ಎರಡು ತಿಂಗಳಲ್ಲಿ ರಾಜ್ಯದ ಮಂತ್ರಿಗಳಾಗುತ್ತಾರೆಂದು ಹೇಳಿದರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿದೇರ್ಶಕ ಈ ರಂಗಾಚಾರಿ, ಮುಖಂಡರುಗಳಾದ ಮಂಜುನಾಥ್, ವಿಜಯ್ ಕುಮಾರ್, ಆದಿನಾರಾಯಣಕುಟ್ಟಿ, ಶ್ರೀನಿವಾಸ್, ಬಿ.ಕೃಷ್ಣಪ್ಪಶೆಟ್ಟಿ, ಬಿ.ವಿ.ಕೃಷ್ಣ, ಚಂದ್ರಪ್ಪ, ರಾಮಶೆಟ್ಟಿ, ರಾಮಪ್ಪ, ಮುನಿಸ್ವಾಮಿ ಶೆಟ್ಟಿ, ಚಂದ್ರಶೇಖರ್, ನಾರಾಯಣಸ್ವಾಮಿ, ಬೀಮಣ್ಣ, ಸುಲೋಚನಮ್ಮ ಸೇರಿದಂತೆ ಇನ್ನು ಅನೇಕ ಮುಖಂಡರು ಹಾಜರಿದ್ದರು.
ಮುಂಬರುವ ದಿನಗಳಲ್ಲಿ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರ ನೇಮಕಾತಿ ಆದಮೇಲೆ ಮತ್ತೆ ಮಹಿಳೆಯರಿಗೆ ಬಡ್ಡಿ ಇಲ್ಲದೆ ಸಾಲ ವಿತರಣೆಗೆ ಭರವಸೆ ಶಾಸಕ ಎಸ್ಎಂ ನಾರಾಯಣಸ್ವಾಮಿ



