ಬೆಂಗಳೂರು: ಮಾದಾವರ ಮೆಟ್ರೋ ನಿಲ್ದಾಣ ಮತ್ತು ಬೆಂಗಳೂರು ಅAತಾರಾಷ್ಟಿçÃಯ ಪ್ರದರ್ಶನ ಕೇಂದ್ರ (ಬಿಐಇಸಿ) ಪ್ರವೇಶದ್ವಾರದ ಬಳಿ ವಾಹನ ಸಂಚಾರವನ್ನು ಸುಗಮಗೊಳಿಸುವ ಇದ್ದೇಶದಿಂದ ಬಿಐಇಸಿ ಮುಂಭಾಗದಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸ್ಥಾಪಿಸಲಾಗಿದೆ. ಈ ಟ್ರಾಫಿಕ್ ಸಿಗ್ನಲ್ ಅನ್ನು ಯಲಹಂಕ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಆರ್. ವಿಶ್ವನಾಥ್ ಅವರು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀ ವಿಶ್ವನಾಥ್ ಅವರು, “ನೈಸ್ ರಸ್ತೆ, ಬಿಐಇಸಿ ಮತ್ತು ಮಾದಾವರ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಜಾಗದಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ ಅಳವಡಿಸಿರುವುದು ಟ್ರಾಫಿಕ್ ಸುಗಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಬಿಐಇಸಿಯಲ್ಲಿ ಬಹಳ ದೊಡ್ಡ ದೊಡ್ಡ ಕಾರ್ಯಕ್ರಮಗಳು ಆಯೋಜನೆಯಾಗುತ್ತಿದ್ದು, ಅಲ್ಲಿ ದೊಡ್ಡ ಪ್ರಮಾಣದ ಜನಸಮೂಹ ಸೇರಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಇದೊಂದು ಬಹಳ ಉತ್ತಮ
ಕೆಲಸ. ಅಲ್ಲದೇ ಇದು ಆರಂಭ ಮಾತ್ರ, ನೆಲಮಂಗಲದವರೆಗೆ ಸಂಪೂರ್ಣ ಹೈವೇಯುದ್ದಕ್ಕೂ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸುವ ಯೋಜನೆಗಳು ಪ್ರಗತಿಯಲ್ಲಿವೆ” ಎಂದು ಹೇಳಿದರು.
ಬಿಐಇಸಿಯ ಪ್ರಯತ್ನಗಳನ್ನುಮಮೆಚ್ಚಿಕೊಂಡು ಮಾತನಾಡಿದ ಬೆಂಗಳೂರು ಗ್ರಾಮಾAತರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಕೆ. ಬಾಬಾ ಐಪಿಎಸ್ ಅವರು, “ಬಿಐಇಸಿ ಪ್ರವೇಶದ್ವಾರದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವುದು ಅತ್ಯಂತ ಅಗತ್ಯವಾಗಿತ್ತು. ಅದರಲ್ಲೂ ವಿಶೇಷವಾಗಿ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸಲು ಈ ಟ್ರಾಫಿಕ್ ಸಿಗ್ನಲ್ ಬಹಳ ಸಹಾಯ ಮಾಡುತ್ತದೆ” ಎಂದು ಹೇಳಿದರು. ಐಎಂಟಿಎAಎ ಮತ್ತು ಬಿಐಇಸಿಯ ಡೈರೆಕ್ಟರ್ ಜನರಲ್ & ಸಿಇಓ ಶ್ರೀ ಜಿಬಕ್ ದಾಸಗುಪ್ತ ಅವರು ಮಾತನಾಡಿ, `ಈ ಹೊಸ ಟ್ರಾಫಿಕ್ ಸಿಗ್ನಲ್ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸುರಕ್ಷತೆ ಮತ್ತು ಅನುಕೂಲತೆ ಒದಗಿಸಲಿದೆ. ಬಿಐಇಸಿ ಸುತ್ತಮುತ್ತ ಇರುವ ನಿವಾಸಿಗಳಿಗೂ ಇದು
ಅನುಕೂಲಕರ ವ್ಯವಸ್ಥೆ ಒದಗಿಸುತ್ತದೆ.
ಕಾರ್ಯಕ್ರಮ ಆಯೋಜಕರು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಈ ಸಿಗ್ನಲ್ ಬಹಳ ಉಪಯುಕ್ತವಾಗಲಿದೆ’ ಎಂದು ಹೇಳಿದರು. ಜೊತೆಗೆ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (ಎನ್ಎಚ್ಎಐ) ಮತ್ತು ಬೆಂಗಳೂರು ಗ್ರಾಮಾAತರ ಪೊಲೀಸ್ ಇಲಾಖೆ ಬಿಐಇಸಿಗೆ ಒದಗಿಸುತ್ತಿರುವ ಬೆಂಬಲವನ್ನು ಸ್ಮರಿಸಿಕೊAಡರು. ಎನ್ಎಚ್ಎಐ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಐಇಸಿ ಕುರಿತು ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಐಎಂಟಿಎAಎ) ನಿರ್ಮಿಸಿದ ಬಿಐಇಸಿ, ಭಾರತದ ಪ್ರಮುಖ ಬಿ೨ಬಿ ಈವೆಂಟ್ಗಳು ಮತ್ತು ಎಂಐಸಿಇ ಕಾರ್ಯಕ್ರಮಗಳಿಗಾಗಿ ಇರುವ ಎಕ್ಸಿಬಿಷನ್ ಮತ್ತು ಕಾನ್ಫರೆನ್ಸ್ ಸೆಂಟರ್ ಆಗಿದೆ.
ಬಿಐಇಸಿ ಸ್ಟಾರ್ಟಪ್ಗಳನ್ನೂ ಸೇರಿದಂತೆ ಜಗತ್ತಿನಾದ್ಯAತದ ಇರುವ ವಿವಿಧ ಕ್ಷೇತ್ರಗಳ ದೊಡ್ಡ, ಮಧ್ಯಮ ಮತ್ತು ಸಣ್ಣ ವ್ಯವಹಾರಗಳ ಉತ್ಪನ್ನ ಬಿಡುಗಡೆ, ತಂತ್ರಜ್ಞಾನ ಪ್ರದರ್ಶನ
ಮತ್ತು ಉದ್ಯಮ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸುತ್ತದೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಎರಡೂ ವಿವಿಧ ಕಾರ್ಯಕ್ರಮಗಳಿಗೆ ಬಿಐಇಸಿಗೆ ಬೆಂಬಲ ನೀಡಿವೆ.



