ನೆಲಮಂಗಲ: ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ತಂದು ಬಡವರಿಗೆ ಅನುಕೂಲ ಮಾಡುತ್ತಿದೆ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಇದರಿಂದ ರಾಜ್ಯ ಸರ್ಕಾರಕ್ಕೆ ತಡೆದುಕೊಳ್ಳಲಾಗುತ್ತಿಲ್ಲ್ಲ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ ತಿಳಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸೋಂಪುರ ಹೋಬಳಿಯಲ್ಲಿ ಜಾತ್ಯಾತೀತ ಜನತಾದಳದ ಮುಖಂಡರು ಹಾಗೂ ಕಾರ್ಯ ಕರ್ತರನ್ನು ಮಂಗಳವಾರ ಭೇಟಿ ಮಾಡಿ ಮಾತನಾಡುತ್ತಾ, ಕಾಂಗ್ರೇಸ್ ಸರ್ಕಾರ ಬಂದಾಗಲೂ ಮಳೆ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಬೆಂಗಳೂರಿನ ಸಾರ್ವಜನಿಕರು ಇಂದು ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ ವಾಟರ್ ಮಾಫಿಯಾ ನಡೆಯುತ್ತಿದೆ. ಅದಕ್ಕೆ ರಾಜ್ಯ ಸರ್ಕಾರದ ಕುಮ್ಮಕ್ಕೂ ಇದೆ. ಡಿಸಿಎಂರವರು ಮೇಕೆ ದಾಟು ತರುತ್ತಿದ್ದೇನೆಂದು ಹೇಳಿದರು. ಅದು ಏಲ್ಲಿ ಹೋಯ್ತು, ಇಂದು ರಾಜ್ಯದಲ್ಲಿರುವ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು ನೀರಿಗಾಗಿ ಪರಿತಪಿಸುವಂತಾಗಿದೆ ಎಂದರು.
ಕೇಂದ್ರ ಸರ್ಕಾರ ಇಂದು ಗರೀಬ್ ಕಲ್ಯಾಣ, ಪ್ರಧಾನ ಮಂತ್ರಿ ಮುದ್ರಾಯೋಜನೆ, ಜಲಜೀವನ್ ಮಿಶನ್, ಪ್ರಧಾನ ಮಂತ್ರಿ ಮಿಶ್ವ ಕರ್ಮ ಯೋಒನೆ, ಪ್ರದಾನ ಮಂತ್ರಿ ಮಾತೃವಂದನಾ ಯೋಜನೆ, ಆಯುಷ್ನಾನ್ ಭಾರತ್ ಆವಾಸ್ ಯೋಜನೆ, ಪಿಎಂ ಕಿಸನ್ ಸಮ್ನಾನ್ ಯೋಜನೆ,ಪ್ರಧಾನ ಮಂತ್ರಿ ಸ್ವಾನಿದಿ ಯೋಜನೆ, ಪ್ರದಾನ ಮಂತ್ರಿ ಜನ ಧನ್ ಯೋಜನೆ, ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯನ್ನು ತಂದು ಜನರಿಗೆ ಅನುಕೂಲ ಮಾಡಿವೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಚ್.ರಾಮಕೃಷ್ಣಪ್ಪ ಮಾತನಾಡಿ ಇಂದು ಮೋದಿ ಹವಾ ಎಲ್ಲಾ ಕಡೆಯಿದೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದ ನಾವುಗಳು ಮೈತ್ರಿ ಧರ್ಮವನ್ನು ಪಾಲಿಸಬೇಕು. ಎಲ್ಲಾ ಜೆಡಿಎಸ್ ನಾಯಕರು ಮೋದಿಪ್ರಧಾನಿಯಾಗಬೇಕೆಂದು ನಿರ್ಧಾರವನ್ನು ಮಾಡಿದ್ದಾರೆ. ಆದುದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಾವು ಹೆಚ್ಚಿಗೆ ಬಹುಮತದಿಂದ ಗೆಲ್ಲುತ್ತೇವೆ ಎಂದರು.
ಜೆಡಿಎಸ್ ನಾಯಕರ ಭೇಟಿ: ಶಿವಗಂಗೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೆ.ಬಿ.ಪ್ರಭುದೇವ, ಮಾಜಿ ಅಧ್ಯಕ್ಷ ಎಸ್.ಸಿ.ಹೊನ್ನಗಂಗಶೇಟ್ಟಿ, ಬಿಡಿಸಿಸಿ ಭ್ಯಾಂಕ್ ನಿರ್ದೇಶಕ ಎಂ.ಸಿ.ಪಟ್ಟಾಭಿರಾಮಯ್ಯ, ನೆಲಮಂಗಲ ತಾ.ಪಂ. ಮಾಜಿಅಧ್ಯಕ್ಷ ಬಿ.ಆರ್.ಪುಟ್ಟಗಂಗಯ್ಯ, ಎಪಿಎಂಸಿ ನಿರ್ದೇಶಕ ಗಂಗಣ್ಣ, ಶಿವಗಂಗೆ ಎಸ್.ಟಿ. ಸಿದ್ದರಾಜು, ಹೊನ್ನೆನಹಳ್ಳಿ ಲೋಕೇಶ್, ಸೋಂಪುರ ಗ್ರಾ.ಪಂ. ಮಾಜಿ.ಅಧ್ಯಕ್ಷ ತೀರ್ಥಪ್ರಸಾದ್, ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ಟಿಎಪಿಎಂಸ್ ಮಾಜಿ ಅಧ್ಯಕ್ಷ ಜಗಜ್ಯೋಗಿ ಬಸವೇಶ್ವರ, ಬಿ.ಎನ್ ಪರಮೇಶ್, ಶಿವರಾಮಯ್ಯ,
ಬಿ.ಪಿ.ಶ್ರೀನಿವಾಸ್ ಮತ್ತಿತರನ್ನು ಬೇಟಿಯಾಗಿದ್ದರು.ಮಾಜಿ.ಶಾಸಕ ಎಂವಿ.ನಾಗರಾಜು, ಬಿ.ಜೆ.ಪಿ ಮುಖಂಡ ಸಪ್ತಗಿರಿ ಶಂಕರ್, ನೆಲಮಂಗಲ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ, ಸೋಂಪುರ ಹೋಬಳಿ ಅಧ್ಯಕ್ಷ ಕೆ.ಕೆ.ಮುರಳಿಧರ, ತಾ.ಪಂ. ಮಾಜಿ ಸದಸ್ಯ ಮಾದೇನಹಳ್ಳಿ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಗ.ನಾಗರಾಜು, ಕರವೇ ಅಧ್ಯಕ್ಷ ಮಂಜುನಾಢ, ಗ್ರಾಮ ಪಂಚಾಯತಿ ಸದಸ್ಯ ಎಂ.ಚಂದ್ರುಶೇಕರ್ , ಮುಖಂಡರಾದ ದೊಡ್ಡೇಗೌಡ, ಗೋವಿಂದ, ರುದ್ರೇಶ, ಗಂಗಾದರ, ಬಿ.ಸಿ.ಗೀರೀಶ, ಹನುಮಂತರಾಜು, ಚೇತನ್ ನಾಯಕ , ಸೋಮಯ್ಯ, ಇತರಿದ್ದರು.