ಕೆಂಗೇರಿ: ಗ್ರಾಮ ಸಭೆಗಳಿಗೆ ಗೈರಾಗುವ ಜನರ ಸೇವೆಗೆ ಸ್ಪಂದಿಸದೆ ಬೇಜವಾಬ್ದಾರಿ ತೋರುವ ತಮ್ಮ ರಾಜೀನಾಮೆಯನ್ನು ನೀಡಿ ಹೋಗಬೇಕು ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಅದ ಪ್ರಸಂಗ ರಾಮೋಹಳ್ಳಿ ಗ್ರಾಮ ಪಂಚಾಯತಿಯ ಎರಡನೇ ಅವದಿಯ ಮೊದಲ ಗ್ರಾಮ ಸಭೆಯಲ್ಲಿ ನಡೆಯಿತು ಕೇವಲ ನೆಪಮಾತ್ರಕ್ಕೆ ಎಂಬಂತೆ ಗ್ರಾಮಸಭೆಗಳು ಅಯೋಜಿಸುವ ಸಂದರ್ಭದಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಗ್ರಾಮ ಸಭೆಗೆ ಗೈರಾದ ಅಧಿಕಾರಿಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಅದೇಶಿಸುವುದಾಗಿ ತಿಳಿಸಿದರು.ನಂತರ ಮಾತನಾಡಿದ ಅವರು ಕ್ಷೇತ್ರದ ಹದಿನ್ಯೂಳು ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೋಹಳ್ಳಿ ಗ್ರಾಮ ಪಂಚಾಯತಿ ಬಹಳ ಯಶಸ್ವಿ ಯಾಗಿ ಅಭಿವೃದ್ಧಿ ಹೊಂದುತ್ತಿರುವ ಪಂಚಾಯತಿ ಯಾಗಿದೆ ಈಗಾಗಲೇ ಮಾದರಿ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಉಳಿದಂತೆ ರಾಮೋಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ವೇಣುಗೋಪಾಲ್ ನೇತೃತ್ವದಲ್ಲಿ ರಾಮೋಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಹೊಂದುತ್ತಿದೆ.
ಉಳಿದ ಕಾಮಗಾರಿಯನ್ನು ಪೂರೈಸಲು 14 ಕೋಟಿ ರೂಪಾಯಿಗಳ ಅನುದಾನವನ್ನು ಬಹು ದಿನಗಳಿಂದ ಬೇಡಿಕೆಯಾಗಿದ್ದು ಒಳಚರಂಡಿ ವ್ಯವಸ್ಥೆ ಕಾಮಗಾರಿ ಹಾಗು ರಾಮೋಹಳ್ಳಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಾಪನೆ ಮಾಡಲು ಈಗಾಗಲೇ ಮಾನ್ಯ ಅರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದನೆ ವ್ಯಕ್ತಪಡಿಸಿದ್ದಾರೆ.
ಅದರಂತೆ ರಾಮೋಹಳ್ಳಿ ಗ್ರಾಮದವರಿಗೆ ಇ ಖಾತೆಯನ್ನು ವಿತರಿಸಲಾಗುತ್ತಿದೆ ಹಾಗೆಯೇ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 25 ಎಕರೆಗಳಷ್ಟು ಸರ್ಕಾರಿ ಜಾಗವಿದ್ದು ಅದನ್ನು ಬಡವರಿಗೆ ಅಶ್ರಯ ನಿವೇಶನ ಕಲ್ಪಿಸಲು ಅಧ್ಯಕ್ಷರಾದ ವೇಣುಗೋಪಾಲ್ ರವರ ಬಹುದಿನಗಳ ಕಾಲ ಬೇಡಿಕೆಗೆ ಅನುಗುಣವಾಗಿ ಮನ್ನಣೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮೋಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ವೇಣುಗೋಪಾಲ್ ಉಪಾಧ್ಯಕ್ಷರಾದ ಗೌರಮ್ಮ ಕೃಷ್ಣಪ್ಪ ಮಾಜಿ ಅದ್ಯಕ್ಷರಾದ ಸುಶೀಲಾ ನಾಗರಾಜ್ ಮಾಜಿ ಉಪಾಧ್ಯಕ್ಷ ರಾದ ಭೀಮನಕುಪ್ಪೆ ಪ್ರಭು ಚಂದ್ರಪ್ಪ ಮುಖಂಡರಾದ ಚಳ್ಳೇಘಟ್ಟ ಮಂಜುನಾಥ್ ಸದಸ್ಯರಾದ ಉಮೇಶ್ ಗೋವಿಂದ್ ಶ್ರೀನಿವಾಸ್ ಹಾಗೂ ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರು ಹಾಗು ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಮತಿ ಬಿಂದು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.