ಬೆಂಗಳೂರು: ಹೈದರಾಬಾದ್ ಮೂಲದ ಶಾಸಕ ಕಾಕೀನ ಗೋವರ್ಧನ ರೆಡ್ಡಿ ಎಂಬುವರ ಪಾಸ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಯೋಜಿಸಿದ ರೇವ್ ಪಾರ್ಟಿಯಲ್ಲಿ ದೊರೆತಿದೆ.ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ ಆರ್ ಫಾರಂಸ್ ನಲ್ಲಿ ಸುಮಾರು 30 ಮಹಿಳೆಯರು ಹಾಗೂ 71 ಪುರುಷರು ಸೇರಿದಂತೆ ನೂರು ಜನಕ್ಕೆ ಈ ರೇವ್ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ಹೇಳಲಾಗಿದೆ.
ಈ ರೇವ್ಪಾರ್ಟಿಯಲ್ಲಿ ಎಂಡಿಎಂಎ ಮಾದಕ ವಸ್ತು ಮತ್ತು ಇತರೆ ಡ್ರಗ್ಸ್ಗಳನ್ನು ಸಹ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ರೇವ್ಪಾರ್ಟ್ ಮೇಲೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ದಾಳಿ ನಡೆಸಿರುತ್ತಾರೆ.ಈ ಪಾರ್ಟಿಯನ್ನು ಹೈದರಾಬಾದ್ ಮೂಲದ ವಾಸು ಎಂಬವರು ಆಯೋಜಿಸಿದರು ಎಂದು ಪೊಲೀಸರು ತಿಳಿಸಿರುತ್ತಾರೆ. ಒಂದು ಬೆಂಜ್ ಕಾರು ಸೇರಿದಂತೆ 15 ವಿವಿಧ ಬಗೆಯ ಕಾರುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ರೆಫಾರ್ಟಿಯಲ್ಲಿ ಆಂಧ್ರ ಪ್ರದೇಶ್ ಹೈದರಾಬಾದ್ ಮತ್ತು ಬೆಂಗಳೂರು ಮೂಲದ ಗಿರಾಕಿಗಳಿದ್ದರೂ ಎಂದು ತಿಳಿಸಿರುತ್ತಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾಯಲ್ಲಿ ಈ ಸಂಬಂಧ ದೂರು ದಾಖಲಾಗಿರುತ್ತದೆ.ಘಟನೆ ಸಂಬಂಧ ಐವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.