ನೆಲಮಂಗಲ: ನೆಲಮಂಗಲ ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಗ್ರಾಮದಲ್ಲಿ ಸಾರಿಗೆ ಬಸ್ ಗಳು ನಿಲುಗಡೆ ಕೊಡದೆ ತೊಂದರೆ ಕೊಡುವುದನ್ನು ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಾಗ ಸೋಮವಾರ ಬೆಳಗ್ಗೆ ದಿಢೀರ್ ಆಗಮಿಸಿದ ಶಾಸಕರು, ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿ ಬಸ್ ಗಳ ನಿಲುಗಡೆಗೆ ಆದೇಶಿಸಿದರು,
ಎರಡು ಹೋಬಳಿಗಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೋಲೂರು ಗ್ರಾಮದಲ್ಲಿ ಹೆದ್ದಾರಿ ಹಾದು ಹೋಗಿದೆ. ಇಲ್ಲಿಂದ ನೂರಾರು ವಿದ್ಯಾರ್ಥಿಗಳು ಕಾರ್ಖಾನೆಗೆ ತೆರಳುವ ಪ್ರಯಾಣಿಕರು ಹೆದ್ದಾರಿಯಲ್ಲಿ ನಿಂತರು ಬಸ್ಗಳು ನಿಲ್ಲಿಸದೆ ಹೋಗುತ್ತಾರೆ. ಅಪರೂಪ ಕೊಂದು ಬಸ್ ನಿಲ್ಲಿಸಿದರೆ ಹೆಚ್ಚಿನ ಪ್ರಯಾರಕರ ಜನಸಂದನೆಯಿಂದ ವೃದ್ಧರೂ ವಿದ್ಯಾರ್ಥಿನಿಯರು ನೂಕು ನುಗ್ಗಲಿನಲ್ಲಿ ಹತ್ತಲಾಗದೆ ಸಮಸ್ಯೆಯಾಗುತ್ತಿದೆ. ಇದರಿಂದ ಆಟೋ. ವ್ಯಾನ್ ಹಾಗೂ ಖಾಸಗಿ ಬಸ್ ಗಳಲ್ಲಿ ಜನರು ಮೊರೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ನಿಲ್ದಾಣಕ್ಕೆ ಹೋಗದ ಬಸ್ ಗಳು: ರಾಷ್ಟ್ರೀಯ ಹೆದ್ದಾರಿ ಸೋಲೂರಿನಲ್ಲಿ ವ್ಯವಸ್ಥಿತ ಬಸ್ ನಿಲ್ದಾಣವಿದ್ದರೂ ಯಾವುದೇ ಬಸ್ ಗಳು ಅಲ್ಲಿ ನಿಲ್ಲಿಸುತ್ತಿರಲಿಲ್ಲ ಹೀಗೆ ಪ್ರಯೋಜನಕ್ಕೆ ಬಾರದ ಬಸ್ ನಿಲ್ದಾಣ ಬೈಕ್, ಕಾರುಗಳ ನಿಲ್ದಾಣವಾಗಿ ಮಾರ್ಪಟ್ಟಗಿತ್ತು. ಹಾಸನ, ಹೊಳೆನರಸೀಪುರ ಡಿಪೋ ಗಳ ಬಸ್ ಗಳು ಕೂಡ ಸೋಲೂರಿನಲ್ಲಿ ನಿಲ್ಲಿಸದೆ ಅಧಿಕಾರಿಗಳು ಹಾಗೂ ಚಾಲಕರು ಉದ್ದಟತನ ಪ್ರದರ್ಶಿಸುತ್ತಿದ್ದರು. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ಶಾಸಕರಾದ ಎನ್. ಶ್ರೀನಿವಾಸ್ ಸ್ಥಳಕ್ಕೆ ಸಾರಿಗೆ ಅಧಿಕಾರಿಗಳನ್ನು ಕರೆಸಿ ಬಸ್ ಗಳು ಸೋಲೂರಿನಲ್ಲಿ ನಿಲುಗಡೆ ಆಗಬೇಕೆಂದು ಖಡಕ್ ಸೂಚನೆ ನೀಡಿದರು.
ನಾಗಮಂಗಲ, ತುರುವೇಕೆರೆ, ಹಾಸನ, ತುಮಕೂರು ಡಿಪೋಗಳ ಎಕ್ಸ್ ಪ್ರೆಸ್ ಬಸ್ಸುಗಳು ನಿಲುಗಡೆಯಾಗಬೇಕು ಎಂದು ಸಾರಿಗೆ ಸಚಿವರೊಂದಿಗೆ ಸ್ಥಳದಲ್ಲೇ ಮಾತನಾಡಿ ಆದೇಶ ಹೊರಡಿಸಲಾಗಿದೆ ಎಂದು ಶಾಸಕರು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಆರ್ ಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್, ಸೋಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರುದ್ರ ಶರ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಕಾಂಗ್ರೆಸ್ ಮುಖಂಡರಾದ ಹನುಮಂತರಾಜು, ಮತ್ತಿತರರು ಉಪಸ್ಥಿತರಿದ್ದರು.