ದೆಹಲಿ: ಅಧಿವೇಶನ ಸಂದರ್ಭದಲ್ಲಿ ಯಾರೂ ಕೂಡ ಅಶಿಸ್ತು-ಅಗೌರವವಾಗಿ ನಡೆದುಕೊಳ್ಳುವುದು ಬೇಡ ಎಂದು ಹಾಗೂ ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ಮರ್ಯಾದೆ ಕಳೆದ ಸಂಸದರು ಪಾಶ್ಚಾತಾಪ ಪಡಲೇಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲಾ ಪಕ್ಷದ ಸಂಸದರರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಸತ್ನ ಮಧ್ಯಂತರ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ಭವನದ ಬಳಿ ಮಾತನಾಡಿದ ಪ್ರಧಾನಿಯವರು, ಸುಗಮ ಕಲಾಪಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವದಲ್ಲಿ ನಾವೆಲ್ಲರೂ “ನಾರಿ ಶಕ್ತಿ”ಗೆ ಸಾಕ್ಷಿಯಾಗಿದ್ದೇವೆ. ಇದು ನಮ್ಮ ದೇಶದ ಮಹಿಳೆಯರಿಗೆ ನೀಡಿದ ಗೌರವ ಎಂದು ಹೇಳಿದ್ದಾರೆ. ಇನ್ನು ಬಜೆಟ್ ಬಗ್ಗೆಯು ಮಾತನಾಡಿದ ಮೋದಿ, ಲೋಕಸಭೆಯ ಚುನಾವಣೆ ನಂತರ ನಾವು ಪೂರ್ಣ ಬಜೆಟ್ನ್ನು ಮಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ.