ಹುಬ್ಬಳ್ಳಿ: ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ. ಪ್ರಧಾನಿ ಮೋದಿ ಅವರು ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದಾರೆ. ಅವರು ಬಂದು ಹೋಗಿದ್ದರಿಂದ ಮೋದಿ ಮತ್ತು ಬಿಜೆಪಿ ಪರ ಒಲವು ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಳ ಕ್ರೆಡಿಟ್ ವಾರ್ ವಿಚಾರವಾಗಿ ಮಾತನಾಡಿ, ಸಹಜವಾಗಿಯೇ ಕ್ರೆಡಿಟ್ ವಾರ್ ಇದೆ.
ಪಕ್ಕದ ಮನೆಯವಳು ಗಂಡು ಹಡೆದರೆ ಇವರು ಪೇಡಾ ಹಂಚುವ ಕೆಲಸ ಮಾಡ್ತಿದ್ದಾರೆಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಸಿಎಂ ಟಾಂಗ್ ಕೊಟ್ಟರು.ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಮುಷ್ಕರ ಕರೆ ವಿಚಾರವಾಗಿ ಮಾತನಾಡಿದ ಅವರು, ಅವರ ಜೊತೆ ನಮ್ಮವರು ಮಾತುಕತೆ ನಡೆಸಿದ್ದಾರೆ. ಇಂಧನ ಸಚಿವರು ಚರ್ಚೆಯಲ್ಲಿದ್ದಾರೆಕೂಡಲೇ ಅದನ್ನು ಬಗೆಹರಿಸುತ್ತಾರೆ.
ನಮ್ಮ ಸಚಿವರು ಈಗಾಗಲೇ ಎರಡು ಸುತ್ತಿನ ಮಾತುಕತೆ ಮಾಡಿದ್ದಾರೆ.ಎಲ್ಲ ವಿವರಗಳನ್ನ ಹಂಚಿಕೊಳ್ಳೋಕೆ ಆಗಲ್ಲ ಎಂದರು.
ಮೋದಿ ದೇವರು ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ, ನಾವು ಮೋದಿ ಅವರನ್ನು ದೇವರು ಅಂದಿಲ್ಲ. ಮೋದಿ ಅವರೂ ತಮ್ಮನ್ನು ದೇವರು ಅಂತ ಅಂದುಕೊಂಡಿಲ್ಲ. ನರೇಂದ್ರ ಮೋದಿ ಅವರು ಒಬ್ಬ ಮಹಾನ್ ನಾಯಕ. ಮೋದಿ ಗಡಿಯಲ್ಲಿ ಭದ್ರತೆ ನೀಡಿ ಅತ್ಯಂತ ಕಷ್ಟಕಾಲದಲ್ಲಿ ಭಾರತವನ್ನು ಎತ್ತಿ ಹಿಡಿದಿದ್ದಾರೆ. ಆಂತರಿಕ ಸುರಕ್ಷತೆ ತಂದು ದೇಶ ಸುಭದ್ರಗೊಳಿಸಿದ್ದಾರೆ. ದೇಶಕ್ಕೆ ಮೋದಿ ಆಪತ್ಬಾಂಧವ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ರೌಡಿಶೀಟರ್ ಫೈಟರ್ ರವಿಗೆ ಮೋದಿ ನಮಸ್ಕಾರ ವಿಚಾರವಾಗಿ ಮಾತನಾಡಿ, ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಾರ್ವಜನಿಕವಾಗಿ ಯಾರೇ ಬಂದ್ರೂ ಮೋದಿ ನಮಸ್ಕಾರ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದರು.
`ಸೋಮಣ್ಣ ಜತೆಗಿದ್ದಾರೆ’
ಸಚಿವ ವಿ.ಸೋಮಣ್ಣ ಮತ್ತು ನಾನು ಹಳೆಯ ಸ್ನೇಹಿರು, ಅವರು ನಮ್ಮ ಜೊತೆಗಿದ್ದಾರೆ, ಮುಂದೆಯೂ ಜೊತೆಗೆ ಇರತ್ತಾರೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿ.ಸೋಮಣ್ಣ ಕಾಂಗ್ರೆಸ್ ಸೇರತ್ತಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಿನ್ನೆ ಸೋಮಣ್ಣ ಅವರೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಕೇವಲ ಔಪಚಾರಿಕವಾಗಿ ಮಾತನಾಡಿದ್ದೇವೆ. ಬೇರೆ ಯಾವ ಚರ್ಚೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
Leave a Review