ಶಿವಮೊಗ್ಗ: ತಾವು ಈ ಭಾರಿಯ ಲೋಕಸಭಾ ಚುನಾವನೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಾಕಣಕ್ಕಿಳಿದಾಗ ಅಪಾರ ಜನ ಬೆಂಬಲ ವ್ಯಕ್ತವಾಗಿತ್ತು.
ಆದರೆ ಮತದಾನದ ವೇಳೆ ಜನ ಮೋದಿಯನ್ನು ಮರೆಯಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ರುವ ಅವರು, ರಾಜ್ಯ ಬಿಜೆಪಿ ಪಕ್ಷದಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಅದನ್ನು ಶುದ್ಧೀಕರಣ ಮಾಡಬೇಕಾಗಿದೆ. ಅಪ್ಪ ಮಕ್ಕಳ ಕಪಿಮುಷ್ಟಿಯಿಂದ ಪಕ್ಷವನ್ನು ಮುಕ್ತ ಮಾಡಬೇಕಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ ಮತ್ತು ಅವರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಬಿಜೆಪಿಯಲ್ಲಿರುವುದರಿಂದ ಲಿಂಗಾಯತ ಸಮಾರ ಅವರೊಟ್ಟಿಗಿದೆ.
ಬಿಜೆಪಿಗೆ ಭೇರೆ ಯವಾವ ಸಮುದಾಯದವರು ಬೇಕಾಗಿಲ್ಲ ಎಂದು ಪ್ರಶ್ನಿಸಿದ ಈಶ್ವರಪ್ಪ, ಹಿಂದುಳಿದ ವರ್ಗದವರಿಗೆ ಈ ಭಾರಿ ಟಿಕೆಟ್ ನೀಡಿಲ್ಲ. ಹಿಂದುಳಿದವರು ಹಾಗೂ ದಲಿತರನ್ನು ಬಿಜೆಪಿಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.