ನವದೆಹಲಿ: ಕ್ರೀಡಾ ಲೋಕದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಅರ್ಜುನ ಅವಾರ್ಡ್ಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೆಸರೂ ಸೇರಿಸಲು ಬಿಸಿಸಿಐ ಮನವಿ ಮಾಡಿದೆ.
ಈ ಸಾಲಿನ ಅರ್ಜುನ ಪ್ರಶಸ್ತಿಗೆ ಈಗಾಗಲೇ ಸಾಧಕರ ಲಿಸ್ಟ್ ರೆಡಿಯಾಗಿದೆ.ಆ ಪಟ್ಟಿಯಲ್ಲಿ ಶಮಿ ಹೆಸರಿಲ್ಲ. ಆದರೆ ಏಕದಿನ ವಿಶ್ವಕಪ್ ಹೀರೋ ಹೆಸರನ್ನು ಸೇರಿಸುವಂತೆ ಬಿಸಿಸಿಐ ಕೊನೆಯ ಕ್ಷಣದಲ್ಲಿ ವಿಶೇಷ ಮನವಿ ಮಾಡಿದೆ.
ಈ ಬಾರಿ ಏಕದಿನ ವಿಶ್ವಕಪ್ ನಲ್ಲಿ 24 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಟೇಕರ್ ಗರಿಮೆಗೆ ಪಾತ್ರರಾಗಿದ್ದ ಮೊಹಮ್ಮದ್ ಶಮಿ ಭಾರತದ ಹೀರೋ ಆಗಿದ್ದರು. ಅವರ ಹೆಸರನ್ನು ಈ ಮೊದಲೇ ನೀಡಲಾದ ಲಿಸ್ಟ್ ನಲ್ಲಿ ಅರ್ಜುನ ಪ್ರಶಸ್ತಿಗೆ ಸೇರಿಸಿರಲಿಲ್ಲ.
ಆದರೆ ಈಗ ಬಿಸಿಸಿಐ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನೂ ಸೇರಿಸುವಂತೆ ಆಯ್ಕೆ ಸಮಿತಿಗೆ ವಿಶೇಷ ಮನವಿ ಮಾಡಿದೆ.
33 ವರ್ಷದ ವೇಗಿ ಸೆಮಿಫೈನಲ್ ನಲ್ಲಿ ಪಡೆದ 7 ವಿಕೆಟ್ ಗಳ ಸ್ಪೆಲ್ ನಿಂದಾಗಿಯೇ ಭಾರತ ಫೈನಲ್ ಗೇರಲು ಸಾಧ್ಯವಾಗಿತ್ತು.