ಲಕ್ನೋ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ.
ಲಕ್ನೋ-ದೆಹಲಿ ವಂದೇ ಭಾರತ್ನಲ್ಲಿ ಭಾಗವತ್ ಅವರು ಮೀರತ್ಗೆ ಹಿಂತಿರುಗುತ್ತಿದ್ದರು. ಈ ವೇಳೆ ಹಾರ್ದೋಯ್ ಗ್ರಾಮದಲ್ಲಿ ಕಲ್ಲು ತೂರಾಟವಾಗಿದೆ. ಗುರುವಾರ ಮಧ್ಯಾಹ್ನ ೩:೩೦ ರ ವೇಳೆಗೆ ಘಟನೆಯಾಗಿದೆ.
ರಾತ್ರಿ ೯ ಗಂಟೆ ಸುಮಾರಿಗೆ ಮೀರತ್ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆಯಲ್ಲಿ ಮೋಹನ್ ಭಾಗವತ್ ಅವರು ಇಳಿದಿದ್ದಾರೆ. ಇಂದು ಮತ್ತು ನಾಳೆ ೨ ದಿನಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರೀಡಾಪಟುಗಳು ಮತ್ತು ಬುದ್ಧಿಜೀವಿಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಕಲ್ಲು ಹೊಡೆದ ಬಗ್ಗೆ ರೈಲ್ವೆ ಪೊಲೀಸ್ ವಿಶೇಷ ತಂಡದಿAದ ತನಿಖೆ ನಡೆಸಲಾಗುತ್ತಿದೆ. ಭಾಗವತ್ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಅವರು ರಾತ್ರಿ ೯ ಗಂಟೆ ಸುಮಾರಿಗೆ ಮೀರತ್ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆಯಲ್ಲಿ ಇಳಿದು ಅವರು ತಂಗಿರುವ ಶತಾಬ್ದಿ ನಗರದ ಮಾಧವ್ ಕುಂಜ್ಗೆ ತೆರಳಿದರು.
ಮೋಹನ್ ಭಾಗವತ್ಪ್ರಯಾಣಿಸುತ್ತಿದ್ದ ರೈಲಿಗೆ ಕಲ್ಲು ತೂರಾಟ



