ಕೆಂಗೇರಿ: ಪ್ರದೇಶ ಜನತಾದಳ (ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯ ವಕ್ತಾರರಾಗಿ ಮೋಹನ್ ಕುಮಾರ್ ಬಿ. ರವರನ್ನ ನೇಮಕ ಮಾಡಲಾಗಿದೆ.
ವಿದ್ಯಾರ್ಥಿ ಸಂಘಟನೆಯ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿ ಪ್ರಸ್ತುತ ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಮದರ್ ತೆರೇಸಾ ವಿದ್ಯಾ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾಗಿ, ಕನ್ನಡಿಗರ ವಿಜಯ ಸೇನೆ ಎಂಬ ಕನ್ನಡ ಪರ ಸಂಘಟನೆಗೆ ರಾಜ್ಯ ಮುಖ್ಯ ಸಲಹೆಗಾರರಾಗಿ ಹಾಗೂ ಇನ್ನು ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮಾ ಜ. ಪಾಟೀಲ್ ಮಾತನಾಡಿ ಇನ್ನು ಮುಂದೆ ರಾಜ್ಯದ್ಯಂತ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೆಡಿಯು ಪಕ್ಷದ ತತ್ವ ಸಿದ್ಧಾಂತ ಹಾಗೂ ಧ್ಯೇಯ ಧೋರಣೆಯಲ್ಲಿ ವಿಶ್ವಾಸವನ್ನಿಟ್ಟುಕೊಂಡು ರಾಜ್ಯ ಹಾಗೂ ಜನತಾದಳದ ಮುಖಂಡರೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಪಕ್ಷವನ್ನು ಮುನ್ನಡಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಸುರೇಶ್, ಕೆಜಿಎಲ್ ರವಿ,ಡಾ. ನಾಗರಾಜ್, ಎಸ್ ವಿಜಯ್ ಕುಮಾರ್ ಮತ್ತು ರಾಜ್ಯದ ಅನೇಕ ಜಿಲ್ಲೆಗಳ ಸ್ವಾಮೀಜಿಗಳು ಶುಭ ಕೋರಿದ್ದಾರೆ.