ಶಿವಶರಣ ಮೋಳಿಗೆ ಮಾರಯ್ಯ ಗವಿ ಸಿದ್ದೇಶ್ವರ ಮಠದ ಶ್ರೀಗಳು ಚಿತ್ರಕ್ಕೆ ಚಾಲನೆ ನೀಡಿದ್ದಾರೆ.”ಶ್ರೀ ಜಗನ್ನಾಥದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಹಾಗೂ ಇತ್ತೀಚಿಗೆ ತೆರೆಕಂಡ “ದಾಸವರೇಣ್ಯ ಶ್ರೀ ವಿಜಯದಾಸರು” ಸೇರಿದಂತೆ ನಾಡಿನ ಹೆಸರಾಂತ ಹರಿದಾಸರ ಚಿತ್ರಗಳ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಮಾತಾಂಬುಜ ಮೂವೀಸ್ ಅರ್ಪಿಸುವ ಹಾಗೂ ಹವಾಲ್ದಾರ್ ಫಿಲಂಸ್ ನ ಮೂಲಕ ಮಧುಸೂದನ್ ಹವಾಲ್ದಾರ್ ಅವರೆ ಈ ಚಿತ್ರವನ್ನು ನಿರ್ಮಿಸುತ್ತಿರುವುದಲ್ಲದೆ, ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದಾರೆ. ಆರು ಹಾಡುಗಳು ಹಾಗೂ ವಚನಗಳು ಈ ಚಿತ್ರದಲ್ಲಿರುತ್ತದೆ. ಆನೆಗುಂದಿ, ಕೊಪ್ಪಳ, ಬಾಗಲಕೋಟೆ ಹಾಗೂ ಹಂಪಿಯ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ.
ಸಿ.ನಾರಾಯಣ ಈ ಚಿತ್ರದ ಛಾಯಾಗ್ರಾಹಕ ಮಾರಯ್ಯ ಕಾಶ್ಮೀರದ ರಾಜರಾಗಿದ್ದವರು. ಅವರು ಕಲ್ಯಾಣಕ್ಕೆ ಬರುತ್ತಾರೆ. ಶರಣ ತತ್ವಕ್ಕೆ ಮನಸೋತು ಶಿವಶರಣರಾಗುತ್ತಾರೆ. ರಾಜ್ಯವನ್ನು ಮಗನಿಗೆ ಒಪ್ಪಿಸುತ್ತಾರೆ. ದಿನವೂ ಕಟ್ಟಿಗೆ ಮಾರಿ ಅದರಿಂದ ಬಂದ ಹಣದಿಂದ ದಾಸೋಹ ಮಾಡಿಸುತ್ತಿರುತ್ತಾರೆ. ನಾನು ಹಾಗೂ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇವೆ. ಈ ಹಿಂದ ಕೆಲವು ಚಿತ್ರಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರು ಮೋಳಿಗೆ ಮಾರಯ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಶರತ್ ಕುಮಾರ್ ದಂಡಿನ್, ಇಂಗಳಗಿ ನಾಗರಾಜ್, ಕೆ.ಪುರುಷೋತ್ತಮ ರೆಡ್ಡಿ, ನಿಶ್ಚಿತ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ನನ್ನ ನಿರ್ದೇಶನದ “ದಾಸವರೇಣ್ಯ ಶ್ರೀವಿಜಯದಾಸರು” ಚಿತ್ರ ಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.