ಬೆಂಗಳೂರು: ರಾಜ್ಯದಲ್ಲಿ ಈ ಬರಗಾಲ ನಿವಾರಣೆಯಾಗುವ ಮುನ್ಸೂಚನೆ ಸಿಕ್ಕಿದೆ. ಈ ವರ್ಷದ ಮಾನ್ಸೂನ್ ಮೇ 31 ರಂದು ಕೇರಳಕ್ಕೆ ಪ್ರವೇಶ ನೀಡಲಿದ್ದು, ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಎಂಟ್ರಿ ಕೊಡಲಿದೆ. ಈ ಮೂಲಕ ರಾಜ್ಯದಲ್ಲಿ ಕಳೆದ ವರ್ಷ ಎದುರಾದ ಭೀಕರ ಬರಗಾಲದ ಪರಿಸ್ಥಿತಿ ಈ ವರ್ಷ ನಿರ್ಮಾಣ ಆಗುವುದಿಲ್ಲ ಎಂಬ ಮಾಹಿತಿಯು ಹೊರಬಿದ್ದಿದೆ.
ಮೇ 31 ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಸಿಕ್ಕಿದ್ದು, ನಾಲ್ಕು ದಿನ ಮುಂಚಿತವಾಗಿ ಇಲ್ಲವೇ ನಾಲ್ಕು ದಿನ ನಂತರ ಕೇರಳಕ್ಕೆ ಮಾನ್ಸೂನ್ ಪ್ರವೇಶ ಆಗಲಿದೆ.
ಮಾನ್ಸೂನ್ ಮಳೆಯು ಈ ಭಾರಿ ಸರಾಸರಿಗಿಂತ ಅಧಿಕವಾಗಿ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತ ಮಾನ್ಸೂನ್ ಮಳೆಯ ಮೇಲೆ ಗ್ರಾಮೀಣಾ ಕೃಷಿ, ಆರ್ಥಿಕತೆ ಅವಲಂಬನೆಯಾಗಿದ್ದು, ಈ ಬಾರಿ ರೈತರ ಮೊಗದಲ್ಲಿ ಸಂತಸ ಮನೆ ಮಾಡಲಿದೆ ಎನ್ನಲಾಗಿದೆ.