ದೇವನಹಳ್ಳಿ: ತಾಲ್ಲೂಕು ಪಂಚಾಯತಿ ವತಿ ಯಿಂದ ಇಲಾಖೆಗಳಿಗೆ ವಿವಿಧ ಸವಲತ್ತುಗಳು ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನಡೆಸಿದರು.
ನಂತರ ಮಾತನಾಡಿದ ಸಚಿವರು ಗ್ರಾಮೀಣ ಪ್ರದೇಶದ ಮಕ್ಕಳು ಕಲಿಕೆ ಯಲ್ಲಿ ಅತ್ಯುತ್ತಮವಾದ ಜ್ಞಾನವುಳ್ಳವ ರಾಗಬೇಕು ಹಾಗೂ ಶಾಲೆಗಳಲ್ಲಿ ಎಲ್ಲಾ ರೀತಿಯ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಸಿಎಸ್ ಆರ್ ಅನುದಾನದಡಿ ಶಾಲೆಗಳ ಅಭಿವೃದ್ಧಿ ಗೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.
50 ಅಂಗನವಾಡಿ ಕೇಂದ್ರಗಳಿಗೆ ಕಲಿಕೆಯ ಸಾಮಗ್ರಿಗಳನ್ನು ಹಾಗೂ ಶಾಲೆಗಳಿಗೆ ಡೆಸ್ಕ್ ಗಳನ್ನು ವಿತರಣೆಮಾಡಲಾಯಿತು,ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬೆಡ್ ವಿತರಣೆ ಮತ್ತು ಆಸ್ಪತ್ರೆಯ ಮೇಲ್ದರ್ಜೆಗೆ ಅನುದಾನವನ್ನು ಕಲ್ಲಿಸಲು ಮುಂದಾಗಿದೆ ಎಂದರು.ನಮ್ಮ ಸರ್ಕಾರ ಮಹಿಳೆಯರು ಸಬಲೀಕರಣಕ್ಕೆ ಹೆಚ್ಚಿನ ಒತ್ತನ್ನು ಕಲ್ಪಿಸುತ್ತಿದೆ ಎಂದರು.
ಮುದ್ದೇನಹಳ್ಳಿಯ ಮದುಸೂಧನ ಸ್ವಾಮೀಜಿಯವರು ರಾಜ್ಯದ ಎಲ್ಲಾ ಮಕ್ಕಳಿಗೆ ರಾಗಿ ಮಿಶ್ರಿತ ಹಾಲನ್ನು ನೀಡಲು ಮುಂದಾಗಿದ್ದಾರೆ ಈ ಯೋಜನೆಯ ಮೂಲಕ ಪೌಷ್ಟಿಕಾಂಶ ಮಕ್ಕಳಿಗೆ ನೀಡುವುದರಿಂದ ಅವರ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅನುಕೂಲಕರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಯ್ಯಪ್ಪ ಅಧ್ಯಕ್ಷರಾದ ಶಾಂತಕುಮಾರ್, ಪ್ರಸಣ್ಣ,ರಾಮಚಂದ್ರಪ್ಪ, ತಹಶೀಲ್ದಾರ್ ಶಿವರಾಜ್, ಕಾರ್ಯನಿರ್ವಾ
ಹಕ ಶ್ರೀನಾಥ್, ಮಹೇಶ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು,ಶ್ರೀ ಬಸವರಾಜ್ ಸಹಾಯಕ ಲೆಕ್ಕಾಧಿಕಾರಿ
ಗಳು ತಾಲೂಕು ಪಂಚಾಯಿತಿ, ಸುಧಾ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಮರನಾರಯಣಸ್ವಾಮಿ ಸಹಾಯಕ ನಿರ್ದೇ
ಶಕರು. ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿರವರು ಮತ್ತು ತಾಲ್ಳೂಕು ಪಂಚಾಯಿತಿ ಸಿಬ್ಬಂದಿ, ಕೂಸಿನ ಮನೆಯ ಆರೈಕೆದಾರರು. ಓಖಐಒ ಸಿಬ್ಬಂದಿ ವಸತಿಯೋಜನೆ ಸಿಬ್ಬಂದಿ ಯವರು ಉಪಸ್ಥಿತರಿದ್ದರು.