ಮಾತೃಭಾಷಾ ದಿನ
ಮಾತೃಭಾಷೆ ಕನ್ನಡ ನಾಡು/ ಅದುವೇ ಬೇಲೂರು ಹಳೇಬೀಡು/
ಮಾತೃ ಭಾಷೆ ಸಕ್ಕರೆಯ ನಾಡು /
ಅದುವೇ ಮಂಡ್ಯದ ಬೀಡು/
ಮಾತೃಭಾಷೆ ಜೋಳದ ನಾಡು /
ಅದುವೇ ಉತ್ತರ ಕರ್ನಾಟಕದ ಬೀಡು /
ಮಾತೃಭಾಷೆ ಮಲೆನಾಡು /
ಅದುವೇ ಚಿಕ್ಕಮಗಳೂರು ಕೊಡಗಿನ ಬೀಡು /
ಮಾತೃಭಾಷೆ ಬಂದರು ನಾಡು /
ಅದುವೇ ದಕ್ಷಿಣ ಕನ್ನಡ ಮಂಗಳೂರು ಬೀಡು/
ಮಾತೃಭಾಷೆ ಕಲ್ಯಾಣ ಕನ್ನಡ ನಾಡು /
ಅದುವೇ ರಾಯಚೂರು ಬಳ್ಳಾರಿ ಬೀಡು/
ಮಾತೃಭಾಷೆ ರಾಗಿಯ ನಾಡು /
ಅದುವೇ ಕೋಲಾರದ ಬೀಡು/
ವೈವಿಧ್ಯ ಬಳಕೆಯ ಕನ್ನಡ ನಾಡು /
ಅದುವೇ ಕರ್ನಾಟಕ ಅಚ್ಚುಮೆಚ್ಚಿನ ನಾಡು/
ಕನ್ನಡ ಕನ್ನಡ ಉಸಿರಾಗಲಿ ಕನ್ನಡ /
ಕನ್ನಡ ಕನ್ನಡ ಹಸಿರಾಗಲಿ ಕನ್ನಡ /
ಬೆಳಗಲಿ, ಹೊಳೆಯಲಿ ಕಸ್ತೂರಿ ನಮ್ಮಕನ್ನಡ /
ಮನೆಮನೆಯ ಹೃದಯದಲ್ಲಿ ಕನ್ನಡ /
– ಡಾ. ಸತ್ಯಮೂರ್ತಿ ಗೂಗಿ, ಬೆಂಗಳೂರು



