ಹುಣಸೂರು: ತನ್ನ ತಾಯಿ ಹಾಗೂ ಸಹೋದರಿಯನ್ನು ವ್ಯಕ್ತಿಯೋರ್ವ ಕೆರೆಗೆ ತಳ್ಳಿ ಸಾಯಿಸಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
ನಿತಿನ್ ಎಂಬಾತ ತನ್ನ ತಾಯಿ ಅನಿತಾ(43), ಸಹೋದರಿ ಧನುಶ್ರೀ(19) ಎಂಬುವರನ್ನು ಕೆರೆಗೆ ತಳ್ಳಿ ಸಾಯಿಸಿದ್ದಾರೆ.ತನ್ನ ತಂಗಿ ಯುವಕನೊರ್ವನೊಂದಿಗೆ ಪ್ರೀತಿಸುತ್ತಿದುದ್ದನ್ನು ವಿರೋಧಿಸಿ, ಈ ದುಷ್ಕøತ್ಯವೆಸಗಿದ್ದಾನೆ ಎನ್ನಲಾಗಿದೆ.
ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಮೃತರ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.