ಹಾಸನದ ರಂಗೋಲಿ ಹಳ್ಳದಲ್ಲಿ ದಿನಾಂಕ 8-05-2024 ರಂದು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ದಲ್ಲಿ ಅದ್ದೂರಿಯಾಗಿ ಅಕ್ಷಯ ತೃತೀಯ ದಿನದ ಸಂಭ್ರಮವನ್ನು ಹಾಗೂ ಮಾತೆಯರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ರಾಜಯೋಗಿನಿ ಬಿ. ಕೆ. ವೀಣಾ ರವರು ವಹಿಸಿಕೊಂಡಿದ್ದು . ಮಾತೆಯರಿಗೆ ಭಕ್ತಿ ಮಾರ್ಗ, ಮುಕ್ತಿ ಮಾರ್ಗ, ಹಲವು ಮಾರ್ಗಗಳ ಬಗ್ಗೆ ವಿಚಾರಗಳನ್ನು ತಿಳಿಸಿದರು. ಶ್ರೀ ದಾದಾ ಲೇಖರಾಜ್ ರವರ ಬಗ್ಗೆ ಮಾಹಿತಿಯನ್ನು ತಿಳಿಸಿ. ಪಾಪ ವಿಮೋಚನೆಯನ್ನು ಯಾವ ರೀತಿ ಧ್ಯಾನದ ಮುಖಾಂತರ, ಭಕ್ತಿಯ ಮುಖಾಂತರ ಪಡೆಯಬಹುದು ಎಂದು ತಿಳಿಸಿದರು.
ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್. ಸಾಹಿತಿ, ಶಿಕ್ಷಕಿ, ಸಾಮಾಜಿಕ ಚಿಂತಕಿ, ಸಂಸ್ಥಾಪಕ ಅಧ್ಯಕ್ಷರು ” ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ”. ಕಾರ್ಯಕ್ರಮದ ಉದ್ದೇಶದ ಜೊತೆಗೆ ಮಾತೆಯರು ಸರ್ವಶಕ್ತಿಯನ್ನು ಹೊಂದಿರುವವರು. ಅವರು ತಮ್ಮದೇ ಆದಂತಹ ವ್ಯಕ್ತಿತ್ವವನ್ನು ಒಳಗೊಂಡಿದ್ದು. ಮುಂದಿನ ಪೀಳಿಗೆಗೆ ಮಾರ್ಗದರ್ಶಕರು ಎಂದು ಹೇಳುತ್ತಾ ಕವನ ವಾಚನವನ್ನು ಹಾಡಿದರು.
ನಂತರ ರಾಣಿ ಚರಾ ಶ್ರೀ ರವರು ನಮ್ಮ ಪಾಪಗಳು ಕಡಿಮೆಯಾದ್ದರಿಂದ ಈ ಸ್ಥಳಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.ಶ್ರೀಮತಿ ವೀಣಾ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ನೃತ್ಯದ ಮುಖಾಂತರ ಕು. ಟೀಷ್ಮಾ ಗೌಡ ಕೆ.ಆರ್. ನಿರ್ವಹಿಸಿದ್ದು. ಬೆನಕ ಕಲಾ ಸೌರಭ ಹಾಸನದವರು ತಂಡವು ಪಂಚಾಭೂತ ಗಳ ನೃತ್ಯ ಮತ್ತು ಪಂಚ ಯುಗಗಳ ಕೋಲಾಟ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮದ ನಿರ್ವಹಣೆ, ನಿರೂಪಣೆಯನ್ನು ಹೆಚ್. ಎಸ್. ಪ್ರತಿಮಾ ಹಾಸನ್ ಯಶಸ್ವಿಯಾಗಿ ಸುಂದರವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಆಯೋಜನೆಯನ್ನು ಸಮ್ಮಿಲನದ ಬಿ. ಕೆ.ಸರಳರವರು ಎಲ್ಲರಿಗೂ ಶುಭ ಕೋರುವರ ಮುಖಾಂತರ, ಸನ್ಮಾನ ಮಾಡುವುದರ ಮುಖಾಂತರ, ದೇವನ ಒಲಮೆಯಿಂದ ಕಾರ್ಯಕ್ರಮವು ಯಶಸ್ವಿಯಾಯಿತು ಎಂದು ಅಭಿನಂದನೆಯನ್ನು ತಿಳಿಸಿದರು.