ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯ 15ನೇ ಆಯವ್ಯಯ ಪತ್ರ ಮಂಡನೆಯಾದದ್ದು ರಾಜ್ಯ ಆರ್ಥಿಕ ವಲಯದಲ್ಲಿ ಸಂಚಲನವನ್ನು ಮೂಡಿಸಿದೆ. ಅಲ್ಲಿ ದೆಹಲಿಯಲ್ಲಿ ರೈತರ ಹಕ್ಕೊತ್ತಾಯ ಮತ್ತು ತೀವ್ರ ಹೋರಾಟ ನಡೆಸಿರುವ ಮಧ್ಯದಲ್ಲಿ ರಾಜ್ಯ ರೈತರ ಹಿತಕಾಯುವಲ್ಲಿ ಈ ಸಾಲಿನ ಬಜೆಟ್ ಆದ್ಯತೆ ನೀಡಿರುವುದು ಗಮನೀಯ.
ಎಲ್ಲಿಹುದು ಸ್ವರ್ಗದ ಹಾದಿ? ರೈತನ ನೇಗಿಲುಗೆರೆಯಲ್ಲಿ…. ಎಂಬ ನಾನ್ನುಡಿಯಂತೆ ಮಾತಿನಂತೆ ದುಡಿಯುವ ಅನ್ನದಾತನ ಶ್ರಮಕ್ಕೆ ಮಾನ್ಯತೆ ದೊರೆತಂತೆ ಇಲ್ಲಿ ತೋರುತ್ತವೆ.ರಾಷ್ಟ್ರಕವಿ ಕುವೆಂಪುರವರ ಸರ್ವ ಸಮ ಸಮಾಜದ ಅಭಿವೃದ್ಧಿಯನ್ನು, ದೂರದೃಷ್ಟಿಯಲ್ಲಿಟ್ಟುಕೊಂಡು ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು.
ಮತ ಮತಗಳಲ್ಲಿ, ಸಾಹಿತ್ಯ ಸಾಹಿತ್ಯಗಳಲ್ಲಿ, ಸಮಾಜ ಸಮಾಜಗಳಲ್ಲಿ ಅಷ್ಟೇ ಏಕೆ? ರಾಜಕೀಯ ಕ್ಷೇತ್ರದಲ್ಲಿ ಸರ್ವತ್ರ ಅದು ಸ್ಥಾಪಿಸಬೇಕು. ಅತ್ಯಂತ ಕೀಳಾದವನಿಗೂ ಮೇಲಾಗುವ ಅವಕಾಶವಾಗಬೇಕು ಇವರೆಡನ್ನು ಒಳಗೊಂಡ ಆಧ್ಯಾತ್ಮಿಕ ದೃಷ್ಟಿಯೇ ಪೂರ್ಣದೃಷ್ಟಿ ಎಂಬ ಸತ್ಯಮಾರ್ಗವನ್ನು ಈ ಸಲದ ಬಜೆಟ್ನಲ್ಲಿ ಪಾಲಿಸಲು ಪ್ರಯತ್ನಿಸಲಾಗಿದೆ.
ಈ ಬಜೆಟ್ ಮಂಡನೆಯ ಸಂದರ್ಭದಲ್ಲಿ `ನೀನಲ್ಲ, ನೀನಲ್ಲ ಕರಿಮಣಿ ನಾಯಕ ನೀನಲ್ಲ’ ಎಂಬ ಚಲನಚಿತ್ರದ ರಿಂಗಣ ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲ ವಿಧಾನಸಭೆಯ ಸಭಾಂಗಣದಲ್ಲಿಯೂ ರಿಂಗಣಿಸಿದ್ದು, ವಿರೋಧ ಪಕ್ಷದ ನಾಯಕರಿಂದ ರಾಜ್ಯ ಬಜೆಟ್ 2024-25 ಆಯವ್ಯಯದ ಅಂದಾಜು ರೂಪಾಯಿ ಭಾಗದಲ್ಲಿ ಎಂದಿನಂತೆ ಸುಮಾರು 18% ರಷ್ಟು ಸಾಲ ಮರುಪಾವತಿವರೆಗೂ ವಿನಯೋಗಿಸಿವರುವುದನ್ನು ಬಿಟ್ಟರೇ ಇತರ ಸಾಮಾನ್ಯ ಸೇವೆಗಳಿಗಾಗಿ ಶೇಕಡಾ 17% ರಷ್ಟು ಇತರ ಆರ್ಥಿಕ ಸೇವೆಗಳಿಗೆ ಶೇಕಡಾ 15% ರಷ್ಟು ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಶೇಕಡಾ 14% ರಷ್ಟು ಮಿಸಲಿರಿಸಿದ್ದು ಗಮನೀಯವಾಗಿದೆ ಇತರ ವಲಯಗಳಾದ ಶಿಕ್ಷಣ, ಆರೋಗ್ಯ, ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕಾಗಿ ಮೀಸಲಿರಿಸಲಾಗಿದೆ.
ಇನ್ನು ರಾಜ್ಯ ಬೊಕ್ಕಸಕ್ಕೆ ಬರುವ ಆದಾಯವನ್ನು ಗಮನಿಸುವುದಾದರೆ ಮುಖ್ಯಭಾಗ ರಾಜ್ಯ ತೆರಿಗೆಯಿಂದ ಶೇಕಡಾ 52% ಸಾಲದ ವಲಯದಿಂದ ಶೇಕಡಾ 28% ಆದರೆ ಕೇಂದ್ರದಿಂದ ಶೇಕಡಾ 12% ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಕೇಂದ್ರ ಸರ್ಕಾರದ ಸಹಾಯದದ ಶೇಕಡಾ 4% ರಾಜ್ಯ ತೆರಿಗೆಯೇತರ ರಾಜ್ಯಸ್ವ ಇರುವ ಶೇಕಡಾ 4% ಎಂದು ಅಂದಾಜಿಸಲಾಗಿದೆ.