ಹೊಸಕೋಟೆ: ನಗರವು ಬೆಂಗಳೂರಿಗೆ ಅತಿಸಮೀಪದಲ್ಲಿದ್ದು ಉಪನಗರವನ್ನಾಗಿಸಬೇ ಕಾದ್ದು ಅಗತ್ಯವಾಗಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.ಅವರು ನಗರದ ಯೋಜನಾ ಪ್ರಾಧಿ ಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಕೇಶವಮೂರ್ತಿ ಹಾಗೂ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.
ಈ ಬಗ್ಗೆ ಈಗಾಗಲೇ ಸರಕಾರದ ಹಂತದಲ್ಲಿ ಚರ್ಚೆಗಳು ಸಹ ಪ್ರಗತಿಯಲ್ಲಿದ್ದು ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಹಿಂದೆ ನಗರವು ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು 2006ರಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಲಾಯಿತು.
2012-13ನೇ ಸಾಲಿನಲ್ಲಿ ಸುಮಾರು 25 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಹ ಪ್ರಾಧಿಕಾರದ ವತಿಯಿಂದ ಕೈಗೊಳ್ಳ
ಲಾಯಿತು. ಇದರೊಂದಿಗೆ 1 ಕೋಟಿ ರೂ.ಗಳವೆಚ್ಚದಲ್ಲಿ ಪ್ರಾಧಿಕಾರಕ್ಕೆ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರಾಧಿಕಾರವು ತನ್ನ ವ್ಯಾಪ್ತಿಯಲ್ಲಿ ನೂತನ ಬಡಾವಣೆಗಳ ರಚನೆಗೆ ಅನುಮೋದನೆ, ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆಯನ್ನುಅನುಮೋದನೆ ಮಾಡುವ ಕಾರ್ಯ ನಿರ್ವಹಿ ಸುತ್ತಿದೆ.
ಪ್ರಸ್ತುತ ಪ್ರಾಧಿಕಾರದಲ್ಲಿ 100 ಕೋಟಿ ರೂ.ಗಳಷ್ಟು ಸಂಪನ್ಮೂಲವಿದೆ. ತಾಲೂಕಿನ ದೊಡ್ಡಗಟ್ಟಿಗನಬ್ಬೆ, ಪೂಜೇನ ಅಗ್ರಹಾರ, ಭಕ್ತರಹಳ್ಳಿ, ಮಲ್ಲಸಂದ್ರ, ತಿರುಮಲಶೆಟ್ಟಿಹಳ್ಳಿ, ತಿಮ್ಮಂಡಹಳ್ಳಿ, ಆಲಗೊಂಡನಹಳ್ಳಿ ಮತ್ತು ಗುಳ್ಳೆಕಾಯಿಪುರ ಒಳಗೊಂಡಂತೆ 3 ಸಾವಿರ ಎಕರೆ ಪ್ರದೇಶವನ್ನು ಬಿಡಿಎ ವ್ಯಾಪ್ತಿಯಿಂದ ಬಿಡುಗಡೆ ಮಾಡಲಾಯಿತು. ನೂತನ ಅಧ್ಯಕ್ಷರು, ಸದಸ್ಯರು ಸಮರ್ಥ ಆಡಳಿತ ನೀಡುವ ಮೂಲಕ ಅವಕಾಶವನ್ನು ಸಾರ್ಥಕಗೊಳಿಸಬೇಕು ಎಂದು ಸೂಚಿಸಿದರು.
ಪ್ರಾಧಿಕಾರದ ನೂತನ ಅಧ್ಯಕ್ಷ ಎನ್. ಕೇಶವಮೂರ್ತಿ ಮಾತನಾಡಿ ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿಯುತ ಹುದ್ದೆಯನ್ನು ನೀಡಿರುವ ಸಂಸದ ಬಿ.ಎನ್.ಬಚ್ಚೇಗೌಡರು, ಶಾಸಕ ಶರತ್ ಬಚ್ಚೇಗೌಡರು, ಮುಖಂಡರಾದ ಬಿ.ವಿ.ಬೈರೇಗೌಡರಿಗೆ, ಪಕ್ಷದ ಎಲ್ಲಾ ಮುಖಂಡರಿಗೆ ಅಭಾರಿಯಾಗಿದ್ದೇನೆ. ಯಾವುದೇ ಸಮಸ್ಯೆಗಳು ಉಂಟಾಗದಂತೆ ಎಚ್ಚರವಹಿಸಿ ಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ಸಮರ್ಥ ಆಡಳಿತವನ್ನು ನೀಡಲು ಶ್ರಮಿಸುತ್ತೇನೆ. ಈ ದಿಶೆಯಲ್ಲಿ ಎಲ್ಲಾ ಸದಸ್ಯರು, ಇಲಾಖಾಧಿಕಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ನೂತನ ಸದಸ್ಯರಾಗಿ ಖಾಜಿಹೊಸಹಳ್ಳಿಯ ಎನ್.ಶಿವಕುಮಾರ್, ಕೊರಳೂರಿನ ಕೆ.ಸಿ.ಸುರೇಶ್, ನಗರದ ಎಚ್.ಎಂ.ಸುಬ್ಬ ರಾಜು ಸಹ ಅಧಿಕಾರ ಸ್ವೀಕರಿಸಿದರು.ಕಮ್ಮೇವಾರಿ ಸಮುದಾಯಕ್ಕೆ ಬಹಳ ವರ್ಷಗಳ ನಂತರ ಉನ್ನತ ಹುದ್ದೆಯನ್ನು ನೀಡಿರುವು
ದಕ್ಕಾಗಿ ತಾಲೂಕಿನ ಜನಾಂಗದ ಮುಖಂಡರು,ಎನ್. ಕೇಶವಮೂರ್ತಿಯವರ ಅಭಿಮಾನಿಗಳುಬಿ.ಎನ್.ಬಚ್ಚೇಗೌಡರಿಗೆ, ಶರತ್ ಬಚ್ಚೇಗೌಡ ರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಬಿ.ವಿ.ಬೈರೇ ಗೌಡ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೊಡ್ಡಗಟ್ಟಿಗನಬ್ಬೆ ನಾರಾಯಣಗೌಡ, ನಗರಸಭೆ ಸದಸ್ಯರಾದ ಗೌತಮ್, ಜಮುನಾ ಹರೀಶ್, ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ನಿರ್ದೇಶಕ ಸಿ.ಮುನಿಯಪ್ಪ, ಮುಖಂಡರಾದ ಗುಟ್ಟಹಳ್ಳಿ ನಾಗರಾಜ್, ಬಲ್ಬ್ ಮಂಜುನಾಥ್, ಎಂ. ವಾಸುದೇವಯ್ಯ, ವಿ.ವಿ.ಸದಾನಂದ್, ಶಾಂತಕುಮಾರ್, ಗೋಪಿ ಇನ್ನಿತರರು ನೂತನ ಅಧ್ಯಕ್ಷರು, ಸದಸ್ಯರನ್ನು ಅಭಿನಂದಿಸಿದರು.