ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿ ಇಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಕ್ಷೇತ್ರದಲ್ಲಿ ನಮ್ಮ ರಾಜ್ಯ ದಿವಾಳಿ ಆಗುತ್ತಿದೆ. ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ. ಎರಡೂವರೆ ವರ್ಷದಲ್ಲಿ ಎರಡೂವರೆ ಲಕ್ಷ ಕೋಟಿ ಸಾಲ ಆಗಿದೆ. ಒಟ್ಟಾರೆ ರಾಜ್ಯದ ಸಾಲ ಎಂಟು ಲಕ್ಷ ಕೋಟಿಗೆ ಏರಿಕೆ ಆಗಿದೆ. ಈ ಸಾಲ ತೀರಿಸುವುದ ಯಾವಾಗ ಬಡ್ಡಿ ಕಟ್ಟುವುದು ಹೇಗೆ? ನಾವು ಅಧಿಕಾರಕ್ಕೆ ಬಂದರೂ ನಿರ್ವಹಣೆ ಮಾಡುವುದು ಕಷ್ಟ. ಗ್ಯಾರಂಟಿಗಳಿಂದಲೂ ಆರ್ಥಿಕ ಹೊರೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ ಎಂದ ಸುಧಾಕರ್, ಅಧಿಕಾರ ಹಂಚಿಕೆ ಆಗಿದ್ದರೆ ಸೌಹಾರ್ದಯುತವಾಗಿ ನಿರ್ಧಾರ ಕೈಗೊಳ್ಳಲಿ. ಗೊಂದಲ ಅನಗತ್ಯ ಕುರಿತು ಮಾತಾಡಿಕೊಳ್ಳಲಿ.
ಮಾತಿಗೆ ನಡೆದುಕೊಳ್ಳುವವನೇ ನಾಯಕ. ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟಪ್ರಕರಣಕ್ಕೆ ಸಂಬಂಧಪಟ್ಟಂತೆ ಮೋದಿ, ಅಮಿತ್ ಶಾ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಮುಂಬೈ ಸ್ಫೋಟ ಆದಾಗ ಮನಮೋಹನ್ ಸಿಂಗ್ ರಾಜೀನಾಮೆ ಕೊಟ್ಟಿದ್ದರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅವರು ಯಾವ ರೀತಿ ಪ್ಲ್ಯಾನ್ ಮಾಡಿದ್ದರು ಎಂದು ಗೊತ್ತಿಲ್ಲ. ಭದ್ರತಾ ಸಿಬ್ಬಂದಿ ೨೫೦೦ಕೆಜಿ ಬಾಂಬ್ ವಶಕ್ಕೆ ಪಡೆದಿದ್ದರು. ದೇಶದಲ್ಲಿ ಯಾವ ರೀತಿ ಅನಾಹುತ ಆಗುತ್ತಿತೋ ಗೊತ್ತಿಲ್ಲ ಅಮೆರಿಕಾ ನ್ಯೂಯಾರ್ಕ್ ನಲ್ಲಿ ಬಾಂಬ್ ಬ್ಲಾಷ್ಟ್ ಆಯಿತು. ಅವರಿಗಿಂತ ಇಂಟೆಲಿಜೆನ್ಸ್ ಯಾರದಾರೂ ಇದೆಯೇ? ಉಗ್ರರಾಮಿಗಳಿಗೆ ಹೊಡೆಯು ಎಲ್ಲಾ ದೇಶಗಳು ಒಂದಾಗಬೇಕು. ಸಾಮರ್ಥ್ಯ ಇಲ್ಲದವರು ಸಉಮ್ಮನೇ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.



