ಇದೊಂದು ಕೇವಲ ಆರಂಭವಷ್ಟೇ ಕರ್ನಾಟಕದ ದೀರ್ಘ ಸುದೀರ್ಘವಾದ ಪ್ರಯಾಣ. ಮನುಜ ಕುಲದ ಪ್ರಯಾಣದಲ್ಲಿ ಹಿಂತಿರುಗಿ ನೋಡಿದಾಗ ಮರೆತಿದ್ದನ್ನು ಗಳಸಿಕೊಳ್ಳಲಾಗದ್ದನ್ನು ಊಹಿಸಿಕೊಳಲಾಗದಷ್ಟು ಸಕ್ಕರೆಯಂತೆ ಸಿಹಿಯಾದ ಅನುಭಂಧವೇ ಈ ಅಭಿಮಾನ ಫೌಂಡೇಶನ್ ಇದೊಂದು ಕೌಟುಂಬಿಕ ವಿಶಿಷ್ಟ ವಿಭಿನ್ನವಾದ ಮನೋಹರವಾದ ಸಂಸ್ಥೆಯು 26.5.2024 ಭಾನುವಾರದಂದು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು (ಕನ್ನಡ ಭವನ) ಮೈಸೂರು ಸಭಾಂಗಣದಲ್ಲಿ ಶ್ರೀಮತಿ ಶ್ರೀ ಲತಾ ಭಾರ್ಗವ್ ಅವರ ನಿರೂಪಣೆಯಲ್ಲಿ ಹಾಗೂ ಶ್ರೀಮತಿ ವಿದ್ಯಾ.ಕೆ ರವರ ಸಂಚಾಲನೆಯಲ್ಲಿ ಶ್ರೀಮತಿ ಶೋಭಾ ಮುರುಳಿಕೃಷ್ಣರವರು ಆಗಮಿಸಿದ್ದ ಎಲ್ಲಾ ಗಣ್ಯಮಾನ್ಯರುಗಳನ್ನು ಅಭಿಮಾನ ಪೂರ್ವಕವಾಗಿ ಸ್ವಾಗತಿಸಿ. ಅಭಿಮಾನ ಫೌಂಡೇಶನ್ ಸಂಸ್ಥೆಯನ್ನು ಶ್ರೀಯುತ ಡಿ.ವೆಂಕಟರಮಣಯ್ಯ (ಕಲ್ಲೂರು) ರವರಿಂದ ಉದ್ಘಾಟನೆ ಮಾಡಲಾಯಿತು.
ಅಭಿಮಾನ ಫೌಂಡೇಶನ್ ಇದೊಂದು ಸ್ವಯಂ ಸೇವಕರ್ತರ ಸಂಸ್ಥೆ ಎಲ್ಲರು ಸ್ವಯಂ ಸೇವಕರ್ತರಾಗಿ ಕಾರ್ಯಕ್ರಮಕ್ಕೆ ಸಕುಟುಂಬ ಸಮೇತ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಿ ಹಾಗೆ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಕಾರ್ಯಕ್ರಮದಲ್ಲಿ ಮನೋರಂಜನೆ ವಿಶ್ವ ಸುಂದರಿ ಕಾರ್ಯಕ್ರಮ ಹಾಗೂ ಸರ್ಟಿಫಿಕೇಟ್ ನೆನಪಿನ ಕಾಣಿಕೆ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಶನಿವಾರ ಬರುವ ವಿಶೇಷ ಅತಿಥಿಗಳು ವಿಶೇಷ ಆಮಂತ್ರಿತರು ಕವಿಗಳಿಗೆ ಉಳಿದುಕೊಳ್ಳುವ ಕೊಠಡಿ ಅಚ್ಚುಕಟ್ಟಾಗಿ ವ್ಯವಸ್ಥೆಮಾಡಲಾಯಿತು. ಇನ್ನು ನಾಡಿನ ಕಲೆ, ವೈಶಿಷ್ಟತೆ, ಸಮೃದ್ಧಿ, ಭವ್ಯತೆ ಸೇರಿದಂತೆ ಹಲವಾರು ಅಂಶಗಳನ್ನು ಭಿನ್ನ ವಿಭಿನ್ನ ಸಾಂಕೇತಿಕವಾಗಿರುವ ಕರ್ನಾಟಕದ ಧ್ರುವತಾರೆ ಎಂದು ಖ್ಯಾತಿ ಪಡೆದಿರುವ ಉಮಾಶಂಕರ್ ಎಂ.ಪಿ ರವರ ಅಧ್ಯಕ್ಷತೆಯಲ್ಲಿ ಸೈಲೆಂಟ್ ಚಿತ್ರದ ಟೀಸರ್ ಉದ್ಘಾಟನೆ ಮಾಡಿದ ಶ್ರೀಯುತರುಕಲೆ ಹಾಡು ಸಾಹಿತ್ಯಗಳ ಮೂಲಕ ಜನಮನ ತಲ್ಲಣಗೊಳಿಸುವ ಮೂಲಕ ಅಭಿಮಾನ ಫೌಂಡೇಶನ್ ಎಂಬ ಸಂಸ್ಥೆಯನ್ನು
ಕರ್ನಾಟಕದ ನಾಡಿನ್ನುದ್ದಗಲಕ್ಕೂ ಪಸರಿಸಿ ನಾಡು ನುಡಿ ಏಳಿಗೆಗಾಗಿ ಶ್ರಮಿಸಿ ಸಾರ್ವಜನಿಕ ಹಿತಾಸಕ್ತಿ ಸಮಸ್ಯೆಯನ್ನು ಅರಿತು ಸುಮಾರು ಕನ್ನಡ ಪರ ದಿಟ್ಟ ಹೆಜ್ಜೆಗಳನ್ನು ದಿಟ್ಟವಾಗಿ ಇಟ್ಟು ಸಾಮಾನ್ಯದಿಂದ ಅಸಾಮಾನ್ಯದವರೆಗೂ ಸಾರ್ವಜನಿಕ ಆರೋಗ್ಯ ಹಿತ ರಕ್ಷಣಾ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಬಡವರಿಗೆ ಉಚಿತ ಆರೋಗ್ಯ ತಪಾಸಣೆ ರಕ್ತ ದಾನ ಶಿಬಿರ ಮಧು ದೇಹ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಚಿಕಿತ್ಸೆಯನ್ನು ಹಾಗೂ ಬಡವರ ಕಷ್ಟಗಳನ್ನು ಆಲಿಸಿ ಬಡವರಿಗೆ ದವಸ ಧಾನ್ಯಗಳನ್ನು ದಿನಸಿ ಪದಾರ್ಥಗಳನ್ನು ವಿತರಣೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡಲಿ ಎಂದು ಹರಸಿ ಹಾರೈಸಿದರು.
ಇನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಲಯನ್ ಬ್ರಮರ ಶಿವಶಂಕರ ರವರು ಅಭಿಮಾನ ಫೌಂಡೇಶನ್ ಅಭಿಮಾನದ ಒಂದು ಭಾಗವಾಗಿದೆ ಅಭಿಮಾನಕ್ಕೆ ಅಂತ್ಯವೇ ಇಲ್ಲ ಅಭಿಮಾನ ಮಾನವನ ಪ್ರತಿಷ್ಠೆಯ ಪ್ರತಿಬಿಂಬವಾಗಿದ್ದು ಇದರಲ್ಲಿ ಜಾತಿ ಧರ್ಮ ಬೇಧ-ಭಾವವಿಲ್ಲದೆ ನಾವೆಲ್ಲ ಒಂದೇ ಎಂದು ನಮ್ಮ ಅಭಿಮಾನದ ಪಾತ್ರ ಮಹತ್ವವಾದ್ದದು ಅಭಿಮಾನವು ಸಂಸ್ಕಾರದ ಒಂದು ಭಾಗವಾಗಿದೆ ಎಂದರು.
ಇನ್ನು ಅಭಿಮಾನ ಫೌಂಡೇಶನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತುನ ಮೈಸೂರು ನಗರ ಜಿಲ್ಲೆಯ ಅಧ್ಯಕ್ಷರು ಮಡ್ಡಿಕೆರೆ ಗೋಪಾಲ್, ಜಾಗ್ರತಿ ಟ್ರಸ್ಟ್ ಅಧ್ಯಕ್ಷರಾದ ಬಿ. ನಾಗೇಶ ಅವರು ಕಾರ್ಯಕ್ರಮದಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಈ ರೀತಿ ಕಾರ್ಯಕ್ರಮಗಳಿಂದ ಕನ್ನಡಿಗರು ಒಂದು ಕಡೆ ಸೇರುವ ಮೂಲಕ ಕನ್ನಡ ನಾಡಿನಲ್ಲಿ ಕನ್ನಡ ಉಳಿಸುವಂತೆ ಆಗುತ್ತದೆ ಈಗಾಗಲೇ ಎಲ್ಲಾ ರಂಗದಲ್ಲಿ ದಕ್ಷಿಣ ಭಾರತದ ಜನರನ್ನ ಕೆಲಸಕ್ಕೆ ಸೇರಿಸುವ ಮೂಲಕ ನಮ್ಮ ಜನರು ಹಿಂದಿ ಕಲಿಯುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇದು ತುಂಬಾ ತೊಂದರೆ ಆಗುತ್ತದೆ ಕನ್ನಡಿಗರಿಗೆ ಎಂದು ಹೇಳುವ ಮೂಲಕ ಕನ್ನಡ ಅಭಿಮಾನ ತೋರಿಸಿದ್ದಾರೆ.
ಸಿರಿಗನ್ನಡ ವೇದಿಕೆ ಉಪಾಧ್ಯಕ್ಷರಾದ ಸಿ. ಎನ್ ಉಮೇಶ್ ಜನಸಿರಿ ಫೌಂಡೇಶನ್ ನಾಗಲೇಖ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಭಾರತಿಉಮೇಶ್, ನಿವೃತ್ತ ಶಿಕ್ಷಕಿ ಲಲಿತ ಆಚಾರ್ ಹಿರಿಯ ಸಾಹಿತಿ ರಾಧಾಮಣಿ ಹಿರಿಯ ಸಾಹಿತಿ ವಿಜಯಲಕ್ಷ್ಮಿ ದೊಡ್ಡಮನಿ ರವರ ಗೌರವನ್ವಿತ ಉಪಸ್ಥಿತಿಯಲ್ಲಿ ಅಭಿಮಾನ ಫೌಂಡೇಶನ್ ಮುಖ್ಯಸ್ಥರಾದ ನಿಶ್ಚಯ್ ಕುಮಾರ್ ರವರು ಎಲ್ಲರನ್ನು ಸ್ವಾಗತಿಸಿ ಗೌರವಿಸಿದರು ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡಸಿಕೊಟ್ಟರು.