ಆರ್ ಅಂಡ್ ಆರ್ ಎಂಟರ್ಪ್ರೆöÊಸಸ್ ಅಡಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್.ನಾಗೀರೆಡ್ಡಿ ನಿರ್ಮಾಣ, ಆರ್. ಅನಂತರಾಜು ನಿರ್ದೇಶನ ಮಾಡುತ್ತಿರುವ ಶ್ರೀಮತಿ ಸಿಂಧೂರ ಚಿತ್ರವು ವಿಜಯದಶಮಿ ಶುಭದಿನದಂದು ಶ್ರೀ ಮಾರಮ್ಮ ದೇವಿ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ನಿರ್ಮಾಪಕರ ಪತ್ನಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಾಯಕನಾಗಿ ವಿಜಯರಾಘವೇಂದ್ರ, ಹಳ್ಳಿ ಹುಡುಗಿಯಾಗಿ ಪ್ರಿಯಾಹೆಗಡೆ ನಾಯಕಿ ರೇಷ್ಮಾ.ವಿ.ಗೌಡ ಉಪನಾಯಕಿ. ವಿಲನ್ಗಳಾಗಿ ಪ್ರಸನ್ನಬಾಗೀನ, ಗಣೇಶ್ರಾವ್ ಕೇಸರ್ಕರ್.
`ಕಾಂತಾರ’ದಲ್ಲಿ ತಾಯಿ ಪಾತ್ರ ನಿರ್ವಹಿಸಿದ್ದ ಮಾನಸಸುಧೀರ್. ಉಳಿದಂತೆ ಮನೋಜ್, ರಿತೇಶ್, ಸ್ನೇಹಜಾದವ್ ಮುಂತಾದವರು ನಟಿಸುತ್ತಿದ್ದಾರೆ ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯಕ್ಕೆ ರಾಜೇಶ್ರಾಮನಾಥ್ ಗ್ಯಾಪ್ ನಂತರ ಸAಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಕಾರ್ಯಕಾರಿ ನಿರ್ಮಾಪಕ ಆರ್.ಗಂಗಾಧರ್, ನೃತ್ಯ ಫೈವ್ಸ್ಟಾರ್ ಗಣೇಶ್ ಅವರದಾಗಿದೆ. ಅಂದ ಹಾಗೆ ಚಿತ್ರದಲ್ಲಿ ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಘರು ಕೆಲಸ ಮಾಡುತ್ತಿರುವುದು ವಿಶೇಷ. ಇದೇ ೨೩ರಿಂದ ಶೂಟಿಂಗ್ಗೆ ತೆರೆಳಲು ತಂಡವು ಸಿದ್ದತೆ ಮಾಡಿಕೊಂಡಿದೆ. ನಂತರ ಮಾತನಾಡಿದ ನಿರ್ದೇಶಕರು,
ಒಂದು ಎಳೆಯ ಕತೆಯನ್ನು ನಿರ್ಮಾಪಕರು ಹೇಳಿದ್ದನ್ನು, ವಿಸ್ತಾರ ಮಾಡಿಕೊಂಡು ಸನ್ನಿವೇಶಗಳನ್ನು ಸಿದ್ದಪಡಿಸಲಾಗಿದೆ. ಹುಡುಗಿಯೊಬ್ಬಳು ಮದುವೆ ಆದರೆ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ.
ಅದೇ ರೀತಿಜವಬ್ದಾರಿ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಮುಂದೆ ಆತನಿಗೆ ಅನೇಕ ತಿರುವುಗಳು ಬರುತ್ತದೆ. ಇದರಿಂದ ಅವನು ಯಾವ ದಿಕ್ಕಿಗೆ ಹೋಗುತ್ತಾನೆ. ಏನೆಲ್ಲಾ ಬದ ಲಾವಣೆಗಳು ಆಗುತ್ತದೆ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ. ಇದೊಂದು ಪಕ್ಕಾ ಕೌಟಂಬಿಕ ಮನರಂಜನೆಯಿAದ ಕೂಡಿದ ಸಿನಿಮಾ ಎನ್ನಬಹುದು. ಬೀದರ್ ಮೂಲದ ಮಾರುತಿ ೬.೪ ಎತ್ತರದ ವಿಶ್ವ ದೇಹದಾರ್ಡ್ಯ ಪಟು ಆಂಜನೇಯ ಸ್ವಾಮಿಯಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ
ರೂಪಿಸಲಾಗಿದೆ ಎಂದು ಆರ್.ಅನಂತರಾಜು ಮಾಹಿತಿ ಬಿಚ್ಚಿಟ್ಟರು.