ದೇವನಹಳ್ಳಿ: ಪ್ರಧಾನ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಸಲುವಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ಹೇಳಿದರು.ಪಟ್ಟಣದ ನಂದಿ ಕ್ರಾಸ್ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ತಾಲೂಕು ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದವರು.
ರೈತರ ಖಾತೆಗಳಿಗೆ ಹಣ ಜಮಾ ಮಾಡುವ ಮೂಲಕ ಮೋದಿ ರೈತರ ಜೀವನಕ್ಕೆ ದಾರಿಯಾಗಿದ್ದಾರೆ. ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಿ ಮಹಿಳೆಯರಿಗೆ ನೆರವಾಗಿದ್ದಾರೆ ಆಸ್ಪತ್ರೆಗಳಿಗೆ ಜನ ಔಷದ ಕೇಂದ್ರ ಸ್ಥಾಪಿಸಿದ್ದಾರೆ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಭಾರತ ದೇಶವು ಹತ್ತು ವರ್ಷಗಳಲ್ಲಿ ಅಭಿವೃದ್ಧಿ ಕಂಡಿದೆ ನಾಗರಿಕರ ಜೀವನವನ್ನು ಬಲಪಡಿಸಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾರೆ ಮತಗಳು ಈ ಬಾರಿ 2 ಪಕ್ಷಗಳು ಸಂಯುಕ್ತ ಅಭ್ಯರ್ಥಿಯಾಗಿರುವ ಡಾ.ಕೆ ಸುಧಾಕರ ಅವರಿಗೆ ಮತ ನೀಡಿ ಅಭಿವೃದ್ಧಿಗಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ, ನಿಕಟ ಪೂರ್ವ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಾಂಡಿಚೆರಿ ಸಚಿವ, ಕುರುಬ ಸಮಾಜದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ ಎ. ರವೀಂದ್ರ, ರವಿಕುಮಾರ್, ಮುನಿ ನಂಜಪ್ಪ, ಹೋಟೆಲ್ ದೇವರಾಜ್, ಬೇಕರಿ ಮಂಜುನಾಥ್ ಇನ್ನು ಹಲವಾರು ಕುರುಬ ಸಮಾಜದ ಮುಖಂಡರು ಹಾಜರಿದ್ದರು.